ಕಾಸರಗೋಡು, ಸೆ. 04 (DaijiworldNews/MB) : ಕೊಲೆ ಪ್ರಕರಣದ ಆರೋಪಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆಯ ಸಬ್ಇನ್ಸ್ ಪೆಕ್ಟರ್ ಸೇರಿದಂತೆ ಹತ್ತು ಮಂದಿ ಪೊಲೀಸರು ಕ್ವಾರಂಟೈನ್ಗೆ ಒಳಗಾಗಿದ್ದಾರೆ.

ಮೀಯಪದವು ಬೇರಿಕೆಯ ಕೃಪಾಕರರವರ ಕೊಲೆ ಪ್ರಕರಣದ ಓರ್ವ ಆರೋಪಿಗೆ ಕೊರೊನಾ ಪತ್ತೆಯಾಗಿದೆ. ಈ ನಡುವೆ ಕಾಸರಗೋಡು ನಗರ ಠಾಣೆಯ ಇಬ್ಬರು ಪೊಲೀಸರಿಗೂ ಕೊರೋನಾ ಪಾಸಿಟಿವ್ ಆಗಿದೆ.