ಕಾಸರಗೋಡು, ಸೆ. 04 (DaijiworldNews/MB) : ರಸ್ತೆ ಬದಿಗಳಲ್ಲಿ ಪರವಾನಿಗೆ ಇಲ್ಲದ ವ್ಯಾಪಾರಕ್ಕೆ ಕಡಿವಾಣ ಹಾಕಲು ಆಹಾರ ಭದ್ರತಾ ಕಾಯ್ದೆ ಮುಂದಾಗಿದ್ದು ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸಿದ್ದಲ್ಲಿ ಮೂರರಿಂದ ಐದು ಲಕ್ಷ ತನಕ ದಂಡ ಹಾಗೂ ಆರು ತಿಂಗಳು ಸಜೆ ಲಭಿಸಲಿದೆ.

ಆಹಾರ ಭದ್ರತಾ ಕಾಯ್ದೆ 2006 ರಂತೆ ಕ್ರಮ ತೆಗೆದುಕೊಳ್ಳಲಾಗುವುದು. ಆಹಾರ ಉತ್ಪನ್ನಗಳ ಮಾರಾಟಕ್ಕೆ ಲೈಸನ್ಸ್, ಆಹಾರ ವಸ್ತು ಖರೀದಿಸಿದ ಬಿಲ್, ಲ್ಯಾಬ್ ತಪಾಸಣಾ ವರದಿ ಇದ್ದಲ್ಲಿ ಮಾರಾಟ ನಡೆಸಬಹುದು. ಆದರೆ ಮಾನದಂಡ ಪಾಲಿಸದೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66, ಕೆ ಎಸ್ ಟಿ ಪಿ ರಸ್ತೆ, ರಾಜ್ಯ ಹೆದ್ದಾರಿ ಮೊದಲಾದೆಡೆಗಳಲ್ಲಿ ಆಹಾರ ಪದಾರ್ಥ, ತರಕಾರಿ, ಗೋಡಂಬಿ, ಹಣ್ಣು ಹಂಪಲು ಮಾರಾಟ ನಡೆಸುವಂತಿಲ್ಲ. ಈ ನಿಟ್ಟಿನಲ್ಲಿ ಆಹಾರ ಭದ್ರತಾ ದಳವು ತಪಾಸಣೆ ನಡೆಸುತ್ತಿದ್ದು, ಪರಾವನಿಗೆ ಇಲ್ಲದೆ ಮಾರಾಟ ನಡೆಸಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.