ಮಂಗಳೂರು, ಸೆ. 04 (DaijiworldNews/SM): ದ.ಕ. ಜಿಲ್ಲೆಯಲ್ಲಿ ೪೨೮ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಹದಿನಾಲ್ಕು ಸಾವಿರದ ಗಡಿದಾಟಿದೆ. ಇಂದಿನ ಸೋಂಕಿತರ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14223ಕ್ಕೆ ಏರಿಕೆಯಾಗಿದೆ.

ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
41 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢ
197 ಐಎಲ್ಐ, 22 ಎಸ್ಎಆರ್ಐ ಪ್ರಕರಣ ದಾಖಲು
168 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ
ಸದ್ಯ ಜಿಲ್ಲೆಯಲ್ಲಿ 2904 ಕೊರೊನಾ ಆಕ್ಟಿವ್ ಕೇಸ್
ಸೆ.೪ರಂದು 222ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಒಟ್ಟು 10928 ಮಂದಿ ಗುಣಮುಖ
ಸೆ.4ರಂದು 7 ಮಂದಿ ಕೊರೊನಾ ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಸೋಂಕಿಗೆ ಒಟ್ಟು ಸಾವಿನ ಸಂಖ್ಯೆ 391ಕ್ಕೆ ಏರಿಕೆ
ಮಂಗಳೂರು ತಾಲೂಕಿನಲ್ಲಿ 222 ಮಂದಿಗೆ ಸೋಂಕು ದೃಢ
ಬಂಟ್ವಾಳ 61, ಪುತ್ತೂರು 54, ಸುಳ್ಯ 45,
ಬೆಳ್ತಂಗಡಿಯಲ್ಲಿ 28 ಕೊರೊನಾ ಪಾಸಿಟಿವ್ ಪ್ರಕರಣ