ಉಡುಪಿ, ಸೆ. 04 (DaijiworldNews/SM): ಉಡುಪಿ ಜಿಲ್ಲೆಯಲ್ಲಿ 186 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12329ಕ್ಕೆ ಏರಿಕೆಯಾಗಿದೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 79 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 77 ಐಎಲ್ಐ ಪ್ರಕರಣಗಳಾಗಿದ್ದು, ಒಬ್ಬರಲ್ಲಿ ಸಾರಿ ಪ್ರಕರಣ ದೃಢಪಟ್ಟಿದೆ. 28 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ರಾಜ್ಯ ಪ್ರಯಾಣ ಮುಗಿಸಿಬಂದ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಸದ್ಯ ಜಿಲ್ಲೆಯಲ್ಲಿ 11967 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಸೆ.4ರಂದು 332 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸೆ.4ರಂದು ಜಿಲ್ಲೆಯಲ್ಲಿ ಕೊವಿಡ್ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಉಡುಪಿಯ 60 ವರ್ಷದ ವ್ಯಕ್ತಿ ಹಾಗೂ ಕುಂದಾಪುರದ 50 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊವಿಡ್ ಸಾವಿನ ಸಂಖ್ಯೆ 108ಕ್ಕೆ ಏರಿಕೆಯಾಗಿದೆ.