ಕಾರ್ಕಳ, ಸೆ. 05 (DaijiworldNews/MB) : ಮದುವೆ ನಿಶ್ಚಿತಾರ್ಥವಾಗಿದ್ದ ಅಕ್ಕ ಮನೆಯಿಂದ ಪ್ರಿಯಕರನೊಂದಿಗೆ ಪರಾರಿಯಾದ ವಿಷಯ ತಿಳಿದು ತಂಗಿ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದಲ್ಲಿ ಶುಕ್ರವಾರ ನಡೆದಿದೆ.

ಮಾಳ ಗ್ರಾಮದ ಯುವತಿ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಗುರುವಾರ ನಾಪತ್ತೆಯಾಗಿದ್ದಳು. ಪೋಷಕರು ಈ ಬಗ್ಗೆ ದೂರು ನೀಡಿದ್ದರು. ಪರಾರಿಯಾದ ಯುವತಿ ತನ್ನ ತಂಗಿಯ ಮೊಬೈಲ್ಗೆ ಕರೆ ಮಾಡಿ ಮನೆಯಲ್ಲಿ ನಿಶ್ಚಯ ಮಾಡಿರುವ ಹುಡುಗನೊಂದಿಗೆ ವಿವಾಹವಾಗುವುದು ನನಗೆ ಇಷ್ಟವಿಲ್ಲ. ನಾನು ಪ್ರೀತಿಸಿದ ಯುವಕನೊಂದಿಗೆ ಹೋಗುತ್ತಿದ್ದೇನೆ. ಹುಡುಕುವ ಪ್ರಯತ್ನ ಮಾಡಬೇಡಿ ಎಂದು ತಿಳಿಸಿದ್ದು ಅಕ್ಕನ ಮಾತು ಕೇಳಿ ಆಘಾತಕ್ಕೆ ಒಳಗದ ತಂಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ.
ಇನ್ನು ತನ್ನ ಪ್ರಿಯಕರನೊಂದಿಗೆ ಹೋದ ಯುವತಿಗೆ ಲಾಕ್ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥವಾಗಿದ್ದು ಆದರೆ ಆಕರೆ ತನ್ನ ಸಹೋದ್ಯೋಗಿ ಅಸ್ಸಾಂ ಮೂಲದ ಯುವಕನನ್ನು ಪ್ರೀತಿಸಿದ್ದಳು ಎಂದು ಹೇಳಲಾಗಿದೆ.
ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.