ಕಾರ್ಕಳ, ಮೇ 05: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರಾವಳಿಯ ಪ್ರವಾಸ ಯಾವುದೇ ರೀತಿಯಲ್ಲೂ ಜನರ ಮೇಲೆ ಪರಿಣಾಮ ಬೀರಲು ಸಾದ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ತಿಳಿಸಿದ್ದಾರೆ.
ಕಾರ್ಕಳದಲ್ಲಿ ದೈಜಿವರ್ಲ್ಡ್ ವಾಹಿನಿಯೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಯವರ ಕರಾವಳಿಯ ಪ್ರವಾಸ ಯಾವುದೇ ರೀತಿಯಲ್ಲೂ ಜನರ ಮೇಲೆ ಪರಿಣಾಮ ಬೀರಲು ಸಾದ್ಯವಿಲ್ಲ, ಬದಲಾಗಿ ನರೇಂದ್ರ ಮೋದಿ ಹೋದ ಕಡೆಯೆಲ್ಲ ಬಿಜೆಪಿಗೆ ಸೋಲು ಉಂಟಾಗಿದೆ ಎಂದು ಹೇಳಿದ್ದಾರೆ.
ಕಾರ್ಕಳ ಕಾಂಗ್ರೆಸ್ ಪಕ್ಷದಲ್ಲಿ ಇದೀಗ ಯಾವುದೇ ರೀತಿಯ ಭಿನ್ನ ಮತವಿಲ್ಲ. ಪ್ರದಾನ ಮಂತ್ರಿಯವರ ಸುಳ್ಳುಗಳಿಂದ ಜನ ಬೇಸತ್ತು ಹೋಗಿದ್ದಾರೆ. ಆದ್ದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಆರಿಸುತ್ತಾರೆ. ಮಾತ್ರವಲ್ಲ ಮೋದಿಯವರ ಸುಳ್ಳು ಭರವಸೆಗಳು ನಿಧಾನವಾಗಿ ಜನರ ಅರಿವಿಗೆ ಬಂದಿದೆ. ಹಾಗಾಗಿ ಮೋದಿಯವರ ಮೋಡಿ ಇಲ್ಲಿನ ಜನರ ಮೇಲೆ ಏನು ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.