ಮೂರುಗೋಳಿ, ಸೆ 05 (DaijiworldNews/PY): ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ಕುರ್ತೋಡಿ ಅವರ ನೇತೃತ್ವದಲ್ಲಿ ಹಾಗೂ ಮಾಜಿ ಶಾಸಕ ಕೆ. ವಸಂತ ಬಂಗೇರರ ಉಪಸ್ಥಿತಿಯಲ್ಲಿ ಪುತ್ತಿಲ - ಬಾರ್ಯ ವಲಯ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಬಾರ್ಯ ಹಾಗೂ ಪುತ್ತಿಲ ಗ್ರಾಮ, ಬೂತ್ಗಳ ಪುನರ್ ರಚನೆ ಹಾಗೂ ಕಾಂಗ್ರೆಸ್ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಶ್ರೀಧರ್ ಎನ್ ಅವರನ್ನು ಬಾರ್ಯ ಗ್ರಾಮ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾಗಿ, ಬಾಲಕೃಷ್ಣ ಶೆಟ್ಟಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತಿಲ ಗ್ರಾಮ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷರಾಗಿ ಉಸ್ಮಾನ್ ಕಲ್ಲಕಟ್ಟ , ಪ್ರಧಾನ ಕಾರ್ಯದರ್ಶಿಯಾಗಿ ಇರ್ಷಾದ್ ಅವರನ್ನು ನೇಮಕ ಮಾಡಲಾಗಿದ್ದು, ಈ ವೇಳೆ ಬಾರ್ಯ - ಪುತ್ತಿಲ ಗ್ರಾಮಗಳ ವಿವಿಧ ಬೂತ್ಗಳಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಗ್ರಾಮ ಹಾಗೂ ಬೂತ್ ವ್ಯಾಪ್ತಿಯಲ್ಲಿ, ಮಹಿಳಾ ಕಾಂಗ್ರೆಸ್ ಘಟಕ ಸೇರಿದಂತೆ ಸೇವಾದಳ ಘಟಕ, ಹಿಂದುಳಿದ ವರ್ಗಗಳ ಘಟಕ, ಎನ್ ಎಸ್ ಯು ಐ, ಯೂತ್ ಕಾಂಗ್ರೆಸ್ ಘಟಕ, ಸಾಮಾಜಿಕ ಜಾಲತಾಣ ಘಟಕ( ಡಿಜಿಟಲ್ ಯೂತ್), ಅಲ್ಪಸಂಖ್ಯಾತ ಘಟಕ, ಕಾರ್ಮಿಕ ಅಲ್ಪಸಂಖ್ಯಾತ ಘಟಕ, ಎಸ್ ಟಿ ಘಟಕ, ಕಿಸಾನ್ ಘಟಕ, ಎಸ್ ಸಿ ಘಟಕ, ಕಾರ್ಮಿಕ ಸಂಘಟಿತ ಘಟಕ ಹಾಗೂ ಇಂಟೆಕ್ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಈ ವೇಳೆ, ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್, ಜಿ.ಪಂ. ಸದಸ್ಯ ಕೆ. ಶಾಹುಲ್ ಹಮೀದ್, ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಶರತ್, ಉಪಸ್ಥಿತರಿದ್ದರು.