ಉಡುಪಿ, ಸೆ 05 (DaijiworldNews/PY): ಜಿಲ್ಲೆಯಲ್ಲಿ ಶನಿವಾರ 175 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12504ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ 1250 ನೆಗೆಟಿವ್ ವರದಿಯಾಗಿದ್ದು, 257 ವರದಿಗಳು ಇನ್ನು ಬಾಕಿ ಇವೆ. ಜಿಲ್ಲೆಯಲ್ಲಿ 61 ಐಎಲ್ಐ ಪ್ರಕರಣಗಳಿದ್ದು, 49 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 1906 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಇಂದು 232 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 10493 ಮಂದಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾದಿಂದಾಗಿ 4 ಮಂದಿ ಸಾವನ್ನಪ್ಪಿದ್ದು, ಉಡುಪಿಯ 79, 70 ವರ್ಷದ ಇಬ್ಬರು ವೃದ್ದೆಯರು, 62 ವರ್ಷದ ವ್ಯಕ್ತಿ ಹಾಗೂ ಕಾರ್ಕಳದ 68 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 112ಕ್ಕೆ ಏರಿದೆ.