ಉಡುಪಿ, ಸೆ 05 (DaijiworldNews/PY): ಜಿಲ್ಲೆಯ ಎಲ್ಲಾ ಐಸಿಯು ಬೆಡ್ಗಳು ಫುಲ್ ಆಗಿದೆ. ಲಕ್ಷಣ ಇರುವವರು ಆರೋಗ್ಯ ತಪಾಸಣೆ ನಡೆಸಿ. ಯಾರು ಪ್ರಾಥಮಿಕ ಸಂಪರ್ಕ ಹೊಂದಿದವವರು ಲಕ್ಷಣ ಇಲ್ಲದವರು ಕೂಡ ಕೊರೊನಾ ತಪಾಸಣೆಗೆ ಒಳಪಡಿಸಲೇಬೇಕು. ಇಲ್ಲದಿದ್ದರೆ ಅವರ ಮೇಲೆ ಎಪಿಡೆಮಿಕ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸುತ್ತೇವೆ ಎಂದು ಡಿಸಿ ಜಗದೀಶ್ ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.




ಕಳೆದೆರಡು ವಾರದಿಂದ ಉಡುಪಿಯಲ್ಲಿ ಕೊರೊನಾ ಬಗ್ಗೆ ಜನರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಜನರಿಗೆ ಸೋಶಿಯಲ್ ಮೀಡಿಯಾಗಳು ತಪ್ಪು ಮಾಹಿತಿ ತಲುಪಿಸುತ್ತಿವೆ. ಯಾವುದೇ ದಂಧೆ ಆಗಲಿ, ಹಣ ಮಾಡುವ ಕೆಲಸ ಇಲ್ಲಿ ನಡೆಯುತ್ತಿಲ್ಲ. ಕೊರೊನಾ ಬಗ್ಗೆ ಅಪಪ್ರಚಾರ ನಿರಂತರವಾಗಿ ನಡೆಯುತ್ತಾ ಇದೆ. ಇದರಿಂದಾಗಿ ಜನರು ಕೂಡ ಅದರಲ್ಲೂ ಹಿರಿಯರು ಹೆದರಿಕೆಯಿಂದ ತಪಾಸಣೆಗೆ ಬರುತ್ತಿಲ್ಲ. ಇದರಿಂದ ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಯಾರು ಕೂಡ ನಿರ್ಲಕ್ಷ್ಯ ವಹಿಸಬಾರದು. ನಿಮ್ಮ ಪೋಷಕರ ಮೇಲೆ ಗೌರವವಿದ್ದರೆ ಅವರನ್ನು ತಕ್ಷಣ ತಪಾಸಣೆಗೊಳಪಡಿಸಿ ಚಿಕಿತ್ಸೆ ಕೊಡಿಸಬೇಕು ಎಂದಿದ್ದಾರೆ.
ಕೊನೆಯ ಕ್ಷಣದಲ್ಲಿ ಕೊರೊನಾ ಲಕ್ಷಣಗಳು ಬಂದವರಿಗೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿದರೆ, ಆ ಆಸ್ಪತ್ರೆ ಯ ಮೇಲೂ ಕಾನೂನು ಕ್ರಮ ಜರುಗಿಸುತ್ತೇವೆ. ಈಗಾಗಲೇ ಜಿಲ್ಲೆಯಲ್ಲಿ 20 ಮೊಬೈಲ್ ಕೊರೊಮಾ ಪರೀಕ್ಷಾ ತಂಡ ಕೆಲಸ ಮಾಡುತ್ತಿದೆ. 10 ಫೀವರ್ ಕ್ಲಿನಿಕ್ಗಳಿವೆ. ಆಂಟಿಜೆನ್ ಟೆಸ್ಟ್ ನಲ್ಲಿ ಶೇ.70 ಖಚಿತತೆ ಸಿಗುತ್ತದೆ. ಆದರೆ ಆರ್ಟಿಪಿಸಿಆರ್ನಲ್ಲಿ ಹೆಚ್ಚು ಖಚಿತತೆ ಸಿಗುತ್ತೆ ಎಂದು ತಿಳಿಸಿದ್ದಾರೆ.
ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿಯಲ್ಲಿ ಕೊರೊನಾ ಬಿ ಚಿಕಿತ್ಸೆಯ ಬಗ್ಗೆ ವ್ಯವಸ್ಥಿತ ಅಪಪ್ರಚಾರ ಮಾಡಲಾಗುತ್ತಿದೆ. ಕಮಿಷನ್ ದಂಧೆ, ಹಣದ ಲೂಟಿ ಹೀಗೆ ಆಸ್ಪತ್ರೆಯ ಬಗ್ಗೆ, ವೈದ್ಯರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ವೈದ್ಯರ ಮಾನಸಿಕತೆಯ ಮೇಲೆ ಪ್ರಭಾವ ಬೀರುತ್ತಿದೆ. ಇದರಿಂದ ಸಂಪೂರ್ಣ ವ್ಯವಸ್ಥೆ ಹಾಳಾಗುತ್ತಿದೆ. ಮಾರ್ಚ್ನಿಂದ - ಜೂನ್ವರೆಗೆ 4 ತಿಂಗಳು ಡಾ. ಟಿ ಎಂ ಪೈ ಆಸ್ಪತ್ರೆಯ ಮಣಿಪಾಲ ಉಚಿತ ಚಿಕಿತ್ಸೆ ಕೊಟ್ಟಿದ್ದಾರೆ ಇದನ್ನು ಅರ್ಥಮಾಡಿಕೊಂಡು ಸಹಕರಿಸಬೇಕು ಎಂದಿದ್ದಾರೆ.