ಮಂಗಳೂರು, ಸೆ 06 (DaijiworldNews/PY): ನದಿಗೆ ಈಜಲು ಇಳಿದ ಮೂವರಲ್ಲಿ ಓರ್ವ ಸಾವನ್ನಪ್ಪಿದ್ದ ಘಟನೆ ಮಂಗಳೂರಿನ ಕಿನ್ನಿಗೋಳಿ ಸಮೀಪದ ಕರ್ನಿರೆ ಎಂಬಲ್ಲಿ ನಡೆದಿದೆ.





ಬೆಂಗಳೂರು ನಿವಾಸಿ ಅನಿಲ್ (32) ಸಾವಿಗೀಡಾದ ದುರ್ದೈವಿ.
ಬೆಂಗಳೂರಿನಿಂದ ಆಗಮಿಸಿದ್ದ 7 ಮಂದಿ ಯುವಕರ ತಂಡದಲ್ಲಿದ್ದ ಮೂವರು ಕರ್ನಿರೆ ಬಳಿಯ ಶಾಂಭವಿ ನದಿಗೆ ಈಜಲೆಂದು ಇಳಿದಿದ್ದರು. ಈ ವೇಳೆ ಮೂವರು ಯುವಕರು ನದಿ ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಈ ಸಂದರ್ಭ ಇಬ್ಬರನ್ನು ಸ್ಥಳಿಯರು ರಕ್ಷಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಲ್ಕಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.