ಕರಾವಳಿ, ಸೆ. 06 (DaijiworldNews/SM): ಉಡುಪಿಯಲ್ಲಿ ರವಿವಾರ 216 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕಾಸರಗೋಡಿನಲ್ಲಿ ಮತ್ತೆ 218 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಉಡುಪಿ ಜಿಲ್ಲೆಯ ಇಂದಿನ ಕೊರೊನಾ ವರದಿ:
ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರ ಸಂಖ್ಯೆ-216
ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 12720ಕ್ಕೆ ಏರಿಕೆ
ಜಿಲ್ಲೆಯಲ್ಲಿ 74 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೊಂಕು
84 ಐಎಲ್ಐ, 11 ಸಾರಿ ಪ್ರಕರಣಗಳು ಪತ್ತೆ
40 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
7 ಮಂದಿ ಅಂತರ್ ರಾಜ್ಯ ಪ್ರಯಾಣದಿಂದ ಬಂದವರು
ಉಡುಪಿಯಲ್ಲಿ ರವಿವಾರ 629 ಮಂದಿಯ ವರದಿ ನೆಗೆಟಿವ್
ಇನ್ನೂ 350 ಮಂದಿಯ ವರದಿ ಬರಲು ಬಾಕಿ
ರವಿವಾರದಂದು ಮತ್ತೆ 270 ಮಂದಿ ಗುಣಮುಖ
ಸದ್ಯ ಉಡುಪಿಯಲ್ಲಿ 1852 ಸಕ್ರಿಯ ಪ್ರಕರಣಗಳು
ಕಾಸರಗೋಡಿನ ಇಂದಿನ ಕೊರೋನಾ ವರದಿ:
ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 218 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 203 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸತತ ಮೂರನೇ ದಿನ ಸೋಂಕಿತರ ಸಂಖ್ಯೆ 200ರ ಗಡಿ ದಾಟುತ್ತಿದೆ. 112 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 1601 ಮಂದಿ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 6104 ಮಂದಿ ನಿಗಾದಲ್ಲಿದ್ದು, 1114 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ. ಮೂರು ದಿನಗಳಲ್ಲಿ 730 ಮಂದಿಗೆ ಸೋಂಕು ದೃಢಪಟ್ಟಿದೆ. ಸೆ. 4 ರಂದು 236, ಸೆ. 5 ರಂದು 276 , ಸೆ.6 ರಂದು 218 ಮಂದಿಗೆ ಸೋಂಕು ಪತ್ತೆಯಾಗಿದೆ.