ಉಡುಪಿ, ಸೆ 07 (DaijiworldNews/PY): ಜಿಲ್ಲೆಯ ಮಲ್ಪೆ ಕೊಡವೂರ್ಯ ಜುಮಾದಿನಗರ ಬಸ್ ನಿಲ್ದಾಣದಲ್ಲಿ ಏಕಾಂಗಿಯಾಗಿ ಕುಳಿತಿದ್ದ ಬಾಲಕನ್ನು ಮೆಸ್ಕಾಂ ಸಿಬ್ಬಂದಿ ರವಿ ಕೊಡವೂರ್ ಅವರು ರಕ್ಷಿಸಿದ್ದಾರೆ.

ಒಂಭತ್ತು ವರ್ಷದ ಬಾಲಕನೋರ್ವ ಜುಮಾದಿನಗರ ಬಸ್ ನಿಲ್ದಾಣದ ಬಳಿ ಏಕಾಂಗಿಯಾಗಿ ಕುಳಿತಿರುವುದನ್ನು ಕಂಡ ರವಿ, ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಮಕ್ಕಳ ಘಟಕದ ಸದಸ್ಯರು ಹುಡುಗನ ವಿಚಾರಣೆ ನಡೆಸಿದ್ದು, ಬಾಲಕ ತನ್ನ ಹೆಸರನ್ನು ಮಾತ್ರ ಹೇಳುತ್ತಿದ್ದ.
ಬಾಲಕನಿಗೆ ತಾತ್ಕಾಲಿಕ ಆಶ್ರಯದ ವ್ಯವಸ್ಥೆ ಮಾಡಲು ಸಜ್ಜಾಗಿದ್ದ ಮಹಿಳಾ ಪೊಲೀಸರಿಗೆ ಮಕ್ಕಳ ರಕ್ಷಣಾ ಘಟಕ ಮಾಹಿತಿ ನೀಡಿದ್ದು, ಪತ್ತೆಯಾಗಿರುವ ಬಾಲಕನ ತಾಯಿ ಎಂದು ಹೇಳುತ್ತಿರುವ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ಬಂದಿದ್ದು, ತನ್ನ ಮಗನನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಮಹಿಳೆ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಬಾಲಕನ ತಾಯಿ ಎಂದು ಪರಿಶೀಲನೆಯ ನಂತ ತಿಳಿದ ಬಳಿಕ, ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೈಲೆಟ್ ಫೆಮಿನಾ ಅವರು ಉಪಸ್ಥಿತಿಯನ್ನು ಬಾಲಕನ್ನು ಆತನ ತಾಯಿಯೊಂದಿಗೆ ಕಳುಹಿಸಿದ್ದಾರೆ.