ಕಾಸರಗೋಡು, ಸೆ.7(DaijiworldNews/HR): ಎರಡು ಕಾರುಗಳ ಮಧ್ಯೆ ಡಿಕ್ಕಿ ಸಂಭವಿಸಿ ಎರಡು ತಿಂಗಳ ಮಗು ಪ್ರಾಣ ಕಳೆದುಕೊಂಡು, ಒಂಬತ್ತು ಮಂದಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಕುಂಬ್ಳೆ ಅರಿಕಡಿಯಲ್ಲಿ ನಡೆದಿದೆ.


ಪಚಂಬಾಲ ಕಲ್ಪರೆ ಮೂಲದ ಮೂಸಾ-ಅಫ್ಸಾ ದಂಪತಿಯ ಮಗು ಅಪಘಾತಕ್ಕೆ ಬಲಿಯಾಗಿದೆ. ಗಾಯಗೊಂಡ ಆರು ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಮೂವರನ್ನು ಕುಂಬ್ಳೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಉಪ್ಪಳ ದಿಕ್ಕಿನಿಂದ ಬರುತ್ತಿದ್ದ ಕಾರು ಬಂಡಿಯೋಡು ಕಡೆಗೆ ಸಾಗುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.