ಬಂಟ್ವಾಳ, ಸೆ 07 (DaijiworldNews/PY): ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.


ಬರಿಮಾರಿನ ಶ್ರೀ ದೇವಿ ಭಜನಾ ಮಂದಿರದಲ್ಲಿ ಬರಿಮಾರು ಬಿಜೆಪಿ ವತಿಯಿಂದ ನಡೆದ ಆಯುಷ್ಮಾನ್ ಭಾರತ್ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಬರಲು ನರೇಂದ್ರ ಮೋದಿಯವರ ನಾಯಕತ್ವ ಹಾಗೂ ದೂರದರ್ಶಿತ್ವ ಕಾರಣ ಎಂದರು.
ಆಯುಷ್ಮಾನ್ ಭಾರತ್ನಿಂದಾಗಿ ಇಂದು ಭಾರತದ ಬಡ ವರ್ಗಕ್ಕೆ ಅನುಕೂಲವಾಗಿದ್ದು ಈ ಯೋಜನೆ ವಿಶ್ವದ ಅತ್ಯಂತ ದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ. ಪಂ. ಸದಸ್ಯರಾದ ಶ್ರೀಮತಿ ಕಮಲಾಕ್ಷಿ ಕೆ ಪೂಜಾರಿ, ಗೋಳ್ತಮಜಲು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಮಾನಾಥ ರಾಯಿ, ಮಾಣಿ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಗಣೇಶ್ ರೈ ಮಾಣಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾಶಿವ ಜಿ, ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಆನಂದ ಪಾಪೆತ್ತಿಮಾರು, ನಿರ್ದೇಶಕರಾದ ಶಿವಾನಂದ ಕರ್ತಕೋಡಿ, ಪಂಚಾಯತ್ ಮಾಜಿ ಸದಸ್ಯರಾದ ಗಣೇಶ್ ಬುರ್ದು, ವಾರ್ಡಿನ ಕಾರ್ಯದರ್ಶಿ ಮೋಹನ್ ಗುಳಿಗಕೋಡಿ, ಗುರುರಾಜ್
1 ನೇ ವಾರ್ಡಿನ ಅಧ್ಯಕ್ಷರಾದ ಸಂತೋಷ್ ಪ್ರಭು, ಉಪಸ್ಥಿತರಿದ್ದರು.ಬರಿಮಾರು 3 ನೇ ವಾರ್ಡಿನ ಅಧ್ಯಕ್ಷ ಅಶ್ವತ್ಥ್ ಬರಿಮಾರು ಸ್ವಾಗತಿಸಿ ನಿರೂಪಿಸಿದರು.