ಕಾಸರಗೋಡು, ಸೆ 07 (DaijiworldNews/PY): ಆಂಬ್ಯುಲೆನ್ಸ್ವೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಉಪ್ಪಳದಲ್ಲಿ ಸೋಮವಾರ ಮುಂಜಾನೆ ನಡೆದಿದೆ.



ಉಪ್ಪಳ ಮಣ್ಣಂಗುಳಿಯ ನೇರ್ವಯಿ ಇಸ್ಲಾಮಿಕ್ ಸೆಂಟರ್ನ ಆಂಬ್ಯುಲೆನ್ಸ್ಗೆ ಮುಂಜಾನೆ ಎರಡು ಗಂಟೆ ಸುಮಾರಿಗೆ ಬೆಂಕಿ ಹಚ್ಚಲಾಗಿದ್ದು, ಸಂಪೂರ್ಣ ಉರಿದಿದೆ. ಆಂಬ್ಯುಲೆನ್ಸ್ನ ಸಮೀಪ ನಿಲ್ಲಿಸಿದ್ದ ಬೈಕ್ ಹಾಗೂ ಆಲ್ಟೋ ಕಾರು ಕೂಡಾ ಭಾಗಶ: ಉರಿದಿದೆ.
ಈ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದ್ದು, ಈ ಕೃತ್ಯವನ್ನುಇಬ್ಬರು ನಡೆಸಿರುವುದಾಗಿ ಕಂಡು ಬಂದಿದೆ. ಮಂಜೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದಾರೆ.