ಬೆಂಗಳೂರು, ಮೇ 06 : ಬೆಳಗಾವಿಯ ಕಿತ್ತೂರು ತಾಲೂಕಿನಲ್ಲಿ ಪಕ್ಷದ ಪ್ರಚಾರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಮತ ಹಾಕದವರನ್ನು ಕೈ ಕಾಲು ಕಟ್ಟಿ ಹಾಕಿ ಕರೆತಂದು ಮತ ಹಾಕಿಸಬೇಕು ಎಂಬ ಹೇಳಿಕೆ, ಸಾಕಷ್ಟು ವಿವಾದ ಸೃಷ್ಟಿಸುತ್ತಿದ್ದಂತೆ, ಇದಕ್ಕೆ ಬಿ.ಎಸ್. ಯಡಿಯೂರಪ್ಪ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಕೈ ಕಾಲು ಕಟ್ಟಿ ಮತ ಹಾಕಿಸಿ ಎಂದರೆ, ಕೈ ಕಾಲು ಹಿಡಿದು ಬೇಡಿಯಾದರೂ ಮತ ಹಾಕಿಸಿ ಎಂದರ್ಥ. ನಾವು ರೈತಾಪಿ ವರ್ಗದವರು ಹಳ್ಳಿಯಲ್ಲಿ ಮಾತಾಡುವುದೇ ಹೀಗೆ. ಹಳ್ಳಿಯ ಸೊಗಡು ತಿಳಿಯದವರಿಗೆ ಇದು ಎಂದಿಗೂ ಅರ್ಥವಾಗುವುದಿಲ್ಲ.ಅಭಿವೃದ್ಧಿಯನ್ನಿಟ್ಟುಕೊಂಡು ಪ್ರಚಾರ ಮಾಡುವುದಕ್ಕೆ ಅಭಿವೃದ್ಧಿಯನ್ನೇ ಮಾಡದವರು ಇಂಥ ಋಣಾತ್ಮಕ ಪ್ರಚಾರ ಮಾಡುತ್ತಿದ್ದಾರೆ. ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ನೀಡಿದ ಬಿಎಸ್ ವೈಹೇಳಿಕೆ ಸಾಕಷ್ಟು ವೈರಲ್ ಆಗಿತ್ತು, ಅಲ್ಲದೆ ಕಾಂಗ್ರೆಸ್ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು.