ಮಂಗಳೂರು, ಸೆ. 07 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 15 ಸಾವಿರ ಗಡಿದಾಟಿದೆ. ಸೋಮವಾರದಂದು ಮತ್ತೆ 152 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳಿಗೆ ಹೋಲಿಸಿದ್ದಲ್ಲಿ ಇಂದು ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿರಂತರ ಏರಿಕೆಯಾಗುತ್ತಿತ್ತು. ದಿನವೊಂದಕ್ಕೆ ಇನ್ನೂರು, ಮುನ್ನೂರು, ನಾಲ್ಕೂರರ ಗಡಿ ದಾಟಿತ್ತು. ಇವುಗಳಿಗೆ ಹೋಲಿಸಿದ್ದಲ್ಲಿ ಇಂದಿನ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದೆಡೆ ಗುಣಮುಖರಾಗಿ ಬಿಡುಗಡೆಗೊಳ್ಳುವವರ ಸಂಖ್ಯೆಯೂ ಕೂಡ ಉತ್ತಮವಾಗಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ಸೋಮವಾರದಂದು 152 ಮಂದಿಯಲ್ಲಿ ಪಾಸಿಟಿವ್
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15078ಕ್ಕೆ ಏರಿಕೆ
ಸೋಮವಾರ 313 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 11754ಕ್ಕೇರಿಕೆ
ಜಿಲ್ಲೆಯಲ್ಲಿ ಮತ್ತೆ ಎಂಟು ಮಂದಿ ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 409ಕ್ಕೆ ಏರಿಕೆ
ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 2915 ಮಂದಿ