ಉಡುಪಿ, ಸೆ. 07 (DaijiworldNews/SM): ಜಿಲ್ಲೆಯಲ್ಲಿ ಸೋಮವಾರದಂದು ಮತ್ತೆ 113 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 12833ಕ್ಕೆ ಏರಿಕೆಯಾಗಿದೆ.

ಇಂದು ಪ್ರಾಥಮಿಕ ಸಂಪರ್ಕದಿಂದ ಐವರಲ್ಲಿ ಸೋಂಕು ದೃಢಪಟ್ಟಿದೆ. 24 ಮಂದಿಯಲ್ಲಿ ಐಎಲ್ ಐ ಪ್ರಕರಣ ದೃಢವಾಗಿದೆ. ಇಬ್ಬರಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 78 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಅಂತರ್ ರಾಜ್ಯ ಪ್ರಯಾಣದಿಂದ ಬಂದ ನಾಲ್ವರಲ್ಲಿ ಸೋಂಕು ಕಂಡುಬಂದಿದೆ.
ಇನ್ನು ಸೋಮವಾರದಂದು ಮತ್ತೆ ಜಿಲ್ಲೆಯಲ್ಲಿ 183 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1780 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರದಂದು ಮತ್ತೆ ಇಬ್ಬರು ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.