ಬಂಟ್ವಾಳ, ಸೆ. 07 (DaijiworldNews/SM): ತಾಲೂಕಿನ ಪ್ರಸಿದ್ಧ ಕಾರ್ಣಿಕ ಕ್ಷೇತ್ರ ಸಜಿಪಮೂಡ ಗ್ರಾಮದ ಪನೋಲಿಬೈಲ್ ಕಲ್ಲುರ್ಟಿ ದೈವಸ್ಥಾನದಲ್ಲಿ ಸಪ್ಟೆಂಬರ್ ೮ರಿಂದ ಅಗೆಲು ಸೇವೆ ಆರಂಭವಾಗಲಿದೆ. ಈ ಬಗ್ಗೆ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಕೊರೊನಾ ಮಹಾಮಾರಿಯಿಂದಾಗಿ ಅಗೇಲು ಸೇವೆ ಸ್ಥಗಿತಗೊಂಡು ಭಕ್ತಾದಿಗಳ ಸೇವಾ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು. ಆದರೆ ಇದೀಗ ಪನೋಲಿಬೈಲ್ ನಲ್ಲಿ ಸೇವಾ ಕಾರ್ಯಗಳು ಮತ್ತೆ ಪ್ರಾರಂಭಗೊಳ್ಳಲಿವೆ. ಇದು ಭಕ್ತಾದಿಗಳಲ್ಲಿ ಸಂತಸ ಉಂಟುಮಾಡಿದೆ.
ಈ ಹಿಂದೆ ಇದ್ದಂತೆ ವಾರದ ಮೂರುದಿನಗಳಲ್ಲಿ ಸೇವೆ ನಡೆಯಲಿದೆ. ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಅಗೇಲು ಸೇವೆ ಇರಲಿದೆ. ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದ ಉಳಿದ ಐದು ದಿನ ಕೋಲ ಸೇವೆ ನೆರವೇರಲಿದೆ. ಕೊರೋನಾ ಅನ್ ಲಾಕ್ ಬಳಿಕ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸೂಕ್ತ ಮುಂಜಾಗರುಕತೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಜರಗಲಿವೆ. ಭಕ್ತರು ಕೂಡ ಸಹಕರಿಸಬೇಕಾದ ಅನಿವಾರ್ಯತೆ ಇದೆ.