ಉಳ್ಳಾಲ, ಸೆ 08 (DaijiworldNews/PY): ಮೀನುಗಾರಿಕೆಗೆ ತೆರಳಿದ ಮೀನುಗಾರ ಬೋಟ್ ಮುಳುಗಿ ಓರ್ವ ನಾಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.

ಉಳ್ಳಾಲ ಹೊಯ್ಗೆ ನಿವಾಸಿ ಆರ್ಥರ್ ಸುನಿಲ್ ಕುವೆಲ್ಲೋ(50) ನಾಪತ್ತೆಯಾದವರು.
ಆರ್ಥರ್ ಸುನಿಲ್ ಕುವೆಲ್ಲೋ ಅವರು ಸೆ.6ರಂದು ಪರ್ಷಿಯನ್ ಬೋಟ್ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆಳಸಮುದ್ರ ಮೀನುಗಾರಿಕೆ ನಡೆಸುವ ಸಂದರ್ಭ ಬೋಟ್ ಮಗುಚಿಬಿದ್ದು ನಾಪತ್ತೆಯಾಗಿದ್ದಾರೆ.