ಕಾಸರಗೋಡು, ಸೆ. 08 (DaijiworldNews/MB) : ಜಿಲ್ಲೆಯಲ್ಲಿ ಮಂಗಳವಾರ 166 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

163 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಹೊರರಾಜ್ಯದಿಂದ ಬಂದ ಓರ್ವ, ವಿದೇಶದಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಇಂದು 92 ಮಂದಿ ಗುಣಮುಖರಾಗಿದ್ದಾರೆ.
ಪಳ್ಳಿಕೆರೆ 1, ಕಾರಡ್ಕ , ಕಿನ್ನೂರು ಕರಿಂದಲ, ಕಳ್ಳಾರ್, ಮೊಗ್ರಾಲ್ ಪುತ್ತೂರು ತಲಾ 1, ಅಜಾನೂರು 14, ಎಣ್ಮಕಜೆ, ಮಡಿಕೈ, ಪೈವಳಿಕೆ, ಪಡನ್ನ, ಮಧೂರು, ಬದಿಯಡ್ಕ ತಲಾ 3, ಪುಲ್ಲೂರು ಪೆರಿಯ 10, ಕಾಸರಗೋಡು 4, ಕುಂಬಳೆ, ನೀಲೇಶ್ವರ ತಲಾ 4, ಉದುಮ, ತ್ರಿಕ್ಕರಿಪುರ ತಲಾ 6, ಚೆಮ್ನಾಡ್ 17, ಚೆಂಗಳ 22, ಪುತ್ತಿಗೆ 7, ಕಾಞಂಗಾಡ್ 12, ಮಂಜೇಶ್ವರ 8, ಪಿಲಿಕ್ಕೋಡ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 23 ಮಂದಿಗೆ ಸೋಂಕು ದೇಢಪಟ್ಟಿದೆ.
6408 ಮಂದಿಗೆ ಇದುವರೆಗೆ ಸೋಂಕು ದ್ರಢಪಟ್ಟಿದೆ. 1864 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6579 ಮಂದಿ ನಿಗಾದಲ್ಲಿದ್ದಾರೆ.