ಉಡುಪಿ, ಸೆ. 08 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 247 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 13080 ಕ್ಕೆ ಏರಿಕೆಯಾಗಿದೆ.

11 ಐಎಲ್ಐ, 6 ಸಾರಿ ಪ್ರಕರಣಗಳಾಗಿದ್ದು 226 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ನಾಲ್ವರು ಪ್ರಯಾಣದ ಇತಿಹಾಸ ಹೊಂದಿದ್ದಾರೆ.
ಇನ್ನು ಮಂಗಳವಾರ 7 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈವರೆಗೆ 121 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.
ಇಂದು 178 ಸೋಂಕಿತರು ಗುಣಮುಖರಾಗಿದ್ದು ಒಟ್ಟು13080 ಮಂದಿ ಗುಣಮುಖರಾಗಿದ್ದಾರೆ.
ಇನ್ನು ಇಂದು ದೃಢಪಟ್ಟ 247 ಕೊರೊನಾ ಸೋಂಕಿತರ ಪೈಕಿ 130 ರೋಗದ ಲಕ್ಷಣಗಳಿದ್ದು 117 ಮಂದಿಯಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ.