ಉಡುಪಿ, ಸೆ. 08 (DaijiworldNews/MB) : ನಿರ್ಲಕ್ಷ್ಯ ಬೇಡ, ಸೋಂಕು ಲಕ್ಷಣ ಕಂಡು ಬಂದರೆ ಕೂಡಲೇ ಕೋವಿಡ್ ಕೇರ್ ಸೇಂಟರ್ಗೆ ಭೇಟಿ ನೀಡಿ ಎಂದು ಉಡುಪಿ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.

ಕೆಲವರು ರೋಗಲಕ್ಷಣಗಳು ಕಂಡು ಬಂದ ಬಳಿಕ ಸ್ವತಃ ಮಾತ್ರೆ ತೆಗೆದುಕೊಳ್ಳುತ್ತಿರುವುದು ಕಂಡು ಬರುತ್ತಿದೆ. ರೋಗ ಉಲ್ಬಣವಾಗಿ ರೋಗ ಉಲ್ಬಣವಾಗಿ ಐಸಿಯು ಚಿಕಿತ್ಸೆ ನೀಡುವ ಹಂತದ ವರೆಗೆ ಕಾಯಬೇಡಿ. ಲಕ್ಷಣ ಕಂಡು ಬಂದ ಕೂಡಲೇ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಎಂದು ಹೇಳಿದ್ದಾರೆ.
ಜಿಲ್ಲಾಡಳಿತವು ಐಸಿಯು ಸೌಲಭ್ಯಗಳನ್ನು ಹೆಚ್ಚಿಸಬಹುದು. ಆದರೆ ಅದಕ್ಕೆ ಬೇಕಾದ ಸಿಬ್ಬಂದಿಗಳನ್ನು ಕೂಡಲೇ ಹೊಂದಿಸುವುದು ಕಷ್ಟಸಾಧ್ಯ. ಉಡುಪಿಯಲ್ಲಿ ಕೊರೊನಾ ತಪಾಸಣೆ, ಚಿಕಿತ್ಸೆ ಎಲ್ಲವೂ ಉಚಿತವಾಗಿದೆ. ಶೀಘ್ರವಾಗಿ ತಪಾಸಣೆ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.