ಸುಳ್ಯ, ಸೆ.9(DaijiworldNews/HR): ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ಯುವಜನ ಸಂಯುಕ್ತಮಂಡಳಿಯಲ್ಲಿ ನಡೆದಿದ್ದು, ಸಭೆಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ.

ಮಾಜಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಮಾತನಾಡಲು ಆರಂಭಿಸಿ ಪಕ್ಷವನ್ನು ತಳ ಮಟ್ಟದಿಂದಲೇ ಎಲ್ಲಾ ನಾಯಕರು ಸಂಘಟಿಸಬೇಕು ಎಂದಾಗ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡ ಧನಂಯ ಅಡ್ಪಂಗಾಯ ಅವರು ಎದ್ದು ನಿಂತು, ನಾನು 36 ವರ್ಷಗಳಿಂಧ ಪಕ್ಷ ಸಂಘಟನೆ ಮಾಡುತ್ತಿದ್ದೆನೆ. ದ.ಕ ಜಿಲ್ಲೆಯಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಶಾಸಕರು ಗೆದ್ದಸಂದರ್ಭದಲ್ಲಿ ಸುಳ್ಯದಲ್ಲಿ ಅವರಿಗೆ ಗೆಲ್ಲಿಸಲು ಸಾಧ್ಯವಾಗಿಲ್ಲ ಎಂದಾಗ ಆ ಸಂದರ್ಭದಲ್ಲಿ 1300 ಚಿಲ್ಲರೆ ಮತಗಳ ಅಂತರಕ್ಕೆ ಮಾತ್ರ ಸೋತಿರುವುದು ಎಂದು ಹೇಳಿದರು.
ಕೊನೆಗೆ ಜಿಲ್ಲಾ ಯುತ್ ಕಾಂಗ್ರೆಸ್ ಅದ್ಯಕ್ಷ ಮಿಥುನ್ ರೈ ರಾಜಿ ಮಾಡಿಸಿದರು ಎಂದು ತಿಳಿದು ಬಂದಿದೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೊನೆಗೆ ಸಭೆಯನ್ನು ಮೊಟಕುಗೊಳಿಸಲಾಯಿತು ಎಂದು ತಿಳಿದುಬಂದಿದೆ.