ಕಾಸರಗೋಡು, ಸೆ.9(DaijiworldNews/HR): ಮಗು ಸಹಿತ ತಾಯಿ ಬಾವಿಗೆ ಹಾರಿದ ಘಟನೆ ಕಾಸರಗೋಡಿನ ಮಡಿಕೈಯಲ್ಲಿ ನಡೆದಿದ್ದು, ತಾಯಿ ಮೃತಪಟ್ಟಿದ್ದು , ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮಡಿಕೈನ ಸುಧಾಕರರವರ ಪತ್ನಿ ಬೀನಾ ತನ್ನ ಎರಡೂವರೆ ವರ್ಷದ ಪುತ್ರಿ ಯನ್ನು ಎತ್ತಿಕೊಂಡು ಮನೆ ಅಂಗಳದ 30 ಅಡಿಯಷ್ಟು ಆಳದ ಬಾವಿಗೆ ಹಾರಿದ್ದು, ಘಟನೆ ಕಂಡ ಸ್ಥಳೀಯರು ಬಾವಿಗೆ ಇಳಿದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತಾಯಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಮಾಹಿತಿ ತಿಳಿದು ಕಾಞ೦ಗಾಡ್ ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೇಲೆಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆಗೆ ಸ್ಪಂದಿಸದೆ ಬೀನಾ ಮೃತಪಟ್ಟಿದ್ದಾರೆ. ಮಗು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾಳೆ . ಕೃತ್ಯಕೆ ಕಾರಣ ತಿಳಿದು ಬಂದಿಲ್ಲ. ನೀಲೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.