ಕಾಸರಗೋಡು, ಸೆ 09 (DaijiworldNews/PY): ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯುವಕನೋರ್ವನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿದ್ಯಾನಗರ ಚಾಲಕುನ್ನುವಿನ ಮುಹಮ್ಮದ್ ಸಿನ್ಸಾದ್ (20) ಎಂದು ಗುರುತಿಸಲಾಗಿದ್ದು, ಹದಿನಾಲ್ಕರ ಹರೆಯದ ಬಾಲಕಿಯ ದೂರಿನಂತೆ ಈತನನ್ನು ಬಂಧಿಸಲಾಗಿದೆ.
ಸ್ನೇಹ ಬೆಳೆಸಿ ಈತ ಕೃತ್ಯ ನಡೆಸಿದ್ದು, 2020ರ ಫೆಬ್ರವರಿ ಹಾಗೂ ಸೆಪ್ಟೆಂಬರ್ನಲ್ಲಿ ಬಾಲಕಿಯ ಸಂಬಂಧಿಕರ ಮನೆಯಲ್ಲಿ ದೌರ್ಜನ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೋಕ್ಸೋ ಕಾಯ್ದೆಯಂತೆ ಈತನ ವಿರುದ್ಧ ಮೊಕ್ಕದ್ದಮೆ ದಾಖಲಿಸಲಾಗಿದೆ.
ಬಾಲಕಿಯ ವರ್ತನೆಯಿಂದ ಸಂಶಯಗೊಂಡ ಮನೆಯವರು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.