ಮಂಗಳೂರು,ಸೆ.9(DaijiworldNews/HR): ಶಿಕ್ಷಕರ ದಿನಾಚರಣೆಯಂದು ಮಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಗೋವಿಂದರಾಜು ಅವರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದಕ್ಕೆ ಆಡಳಿತ ಮಂಡಳಿ ವಿವರಣೆ ಕೋರಿ ನೋಟಿಸ್ ನೀಡಿದೆ.


ಪ್ರೊಫೆಸರ್ ಗೋವಿಂದರಾಜು ಅವರು ತಮ್ಮ ಫೇಸ್ಬುಕ್ನಲ್ಲಿ, "ನಾನು ಶಿಕ್ಷಕನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಏಕೆಂದರೆ ಕೆಲಸವಿಲ್ಲದೆ ಉತ್ತಮ ಸಂಬಳವನ್ನು ಪಡೆಯುತ್ತಿದ್ದೇನೆ" ಎಂಬುದಾಗಿ ಪೋಸ್ಟ್ ಮಾಡಿದ್ದು, ಅನೇಕರು ಟ್ವೀಟ್ ಮತ್ತು ವಾಟ್ಸಾಪ್ ಸ್ಟೇಟಸ್ ಗಳ ಮೂಲಕ ಈ ಪೋಸ್ಟ್ ಅನ್ನು ಹಂಚಿಕೊಳ್ಳುವುದರ ಜೊತೆಗೆ ಗೋವಿಂದರಾಜು ಅವರನ್ನು ಟೀಕಿಸಿದ್ದಾರೆ.
ಇನ್ನು ಕರೋನವೈರಸ್ ಕಾರಣದಿಂದಾಗಿ ಅನೇಕ ಶಿಕ್ಷಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ ಜೊತೆಗೆ ಅನೇಕರು ಸಂಬಳ ಪಡೆಯುತ್ತಿಲ್ಲ ಅಥವಾ ಸಂಬಳದ ಒಂದು ಭಾಗವನ್ನು ಮಾತ್ರ ಪಡೆಯುತ್ತಿದ್ದಾರೆ ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಇಂತಹ ಸಮಯದಲ್ಲಿ ಈ ರೀತಿಯಾದ ಪೋಸ್ಟ್ ಗಳನ್ನು ಹಾಕುವುದು ಅಸಮರ್ಪಕವಾಗಿದೆ.
ಫೇಸ್ಬುಕ್ ಪೋಸ್ಟ್ ವಿಶ್ವವಿದ್ಯಾನಿಲಯದ ನಿರ್ವಹಣೆಯ ಗಮನಕ್ಕೆ ಬಂದ ನಂತರ, ಅದು ಏಳು ದಿನಗಳಲ್ಲಿ ಅವರ ಪ್ರತಿಕ್ರಿಯೆಯನ್ನು ಕೋರಿ ಪ್ರಾಧ್ಯಾಪಕರಿಗೆ ನೋಟಿಸ್ ನೀಡಿತು. ಇನ್ನು ಮುಂದೆ ಅಂತಹ ಪೋಸ್ಟ್ ಗಳನ್ನು ಹಾಕದಂತೆ ಮತ್ತು ಈಗಾಗಲೇ ಹಾಕಲಾದ ಪೋಸ್ಟನ್ನು ಅಳಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಪಿ.ಎಸ್.ಯಡಪಾಡಿತ್ತಾಯ ಹೇಳಿದ್ದಾರೆ.