ಕಾಸರಗೋಡು, ಸೆ. 09 (DaijiworldNews/MB) : ಜಿಲ್ಲೆಯಲ್ಲಿ 270 ಮಂದಿಗೆ ಬುಧವಾರ ಕೊರೋನಾ ಸೋಂಕು ದೃಢಪಟ್ಟಿದೆ.

242 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 144 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದುವರೆಗೆ 6678 ಮಂದಿ ಗೆ ಸೋಂಕು ದೃಢಪಟ್ಟಿದೆ. 4642 ಮಂದಿ ಗುಣಮುಖರಾಗಿದ್ದಾರೆ. 46 ಮಂದಿ ಮೃತಪಟ್ಟಿದ್ದಾರೆ. 6214 ಮಂದಿ ನಿಗಾದಲ್ಲಿದ್ದು, ಪೈಕಿ 1347 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.