ಉಡುಪಿ, ಸೆ. 09 (DaijiworldNews/MB) : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗಗಳ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಅನುಧಾನಗಳನ್ನು ನೀಡಿ ಸ್ಫಂದಿಸುತ್ತಿವೆ ಎಂದು ಉಡುಪಿ-ಚಿಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.









ಅವರು ಬೆಳ್ವೆ ಮರೂರು ತೊಂಭತ್ತು ಹೊಳೆಯಿಂದ ಕೊಡಾಬೈಲು ರಸ್ತೆ ಸಂಪರ್ಕ ಕಲ್ಪಿಸಲು ನೂತನವಾಗಿ ನಿರ್ಮಾಣಗೊಳ್ಳಲಿರುವ ಸೇತುವೆಗೆ ಹಾಗೂ ಕುಂಟುಹೊಳೆಯಿಂದ ಬಡಾಬೆಪ್ಪೆ, ಗುಡ್ಡೆಯಂಗಡಿ ರಸ್ತೆ ಸಂಪರ್ಕ ಕಲ್ಪಿಸಲು ನೂತನವಾಗಿ ನಿರ್ಮಾಣಗೊಳ್ಳಲಿರುವ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಬುಧವಾರ ಹೇಳಿದರು.
ಆಟಲ್ ಬಿಹಾರಿ ವಾಜಪೇಯಿ ಆಡಳಿತಾವಧಿಯಲ್ಲಿ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ಹೊಂದಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು. ಪ್ರಧಾನಿ ನರೇಂದ್ರ ಮೋದಿಯವರು ಹಳ್ಳಿಗಳಲ್ಲಿ ರಸ್ತೆ,ಶಿಕ್ಷಣ,ಕೃಷಿ ಸೇರಿದಂತೆ ಇನ್ನೀತರ ಅಭಿವೃದ್ಧಿ ಕಾರ್ಯಗಳಿಗೆ ಮಹತ್ವ ನೀಡಿ, ಜನರ ಬೇಡಿಕೆಗಳಿಗೆ ಸ್ಫಂದಿಸುತ್ತಿದ್ದಾರೆ. ಕರೋನಾ ಸೋಂಕಿನ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಹಜವಾಗಿ ಸ್ವಲ್ಪ ಮಟ್ಟಿನ ಹಿನ್ನಡೆಗೆ ಕಾರಣವಾಗಿದೆ. ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಆಡಳಿತದ ಸರ್ಕಾರವಿದೆ. ಸರ್ಕಾರ ಜನರ ಆಶೋತ್ತರಗಳಿಗೆ ಸ್ಫಂದಿಸಲು ಬದ್ಧವಾಗಿದೆ. ಜನತೆ ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಆಧ್ಯತೆ ನೀಡಬೇಕು ಎಂದರು.
ಕರೋನಾ ಸೋಂಕಿನ ಹಿನ್ನಲೆಯಲ್ಲಿ ದೇಶದಿಂದ ಹಿಡಿದು ಹಳ್ಳಿಗಳ ಹಳ್ಳಿಯಲ್ಲಿಯೂ ಲಾಕ್ಡೌನ್,ಜನಜಾಗ್ರತಿ,ಹಳ್ಳಿ ಮದ್ದುಗಳ ಬಳಕೆ,ಆರೋಗ್ಯದ ಬಗ್ಗೆ ಕಾಳಜಿಯಿಂದ ಕರೋನಾ ಸೋಂಕು ಪ್ರಮಾಣ ಕಡಿಮೆಯಾಗಲು ಸಾಧ್ಯವಾಗಿದೆ. ಕರೋನಾ ಸೊಂಕು ಹರಡುವ ಆರಂಭದ ಸಂದರ್ಭದಲ್ಲಿ ಕರೋನಾ ಸೊಂೀಕು ಪತ್ತೆಗಾಗಿ 4 ಲ್ಯಾಬ್ಗಳನ್ನು ಹೊಂದಲಾಗಿತು, ಜನರ ಆರೋಗ್ಯದ ಕಾಳಜಿಗೆ ಆಧ್ಯತೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು 2000 ಕ್ಕೂ ಮಿಕ್ಕಿ ಲ್ಯಾಬ್ಗಳನ್ನು ತೆರೆಯುವಲ್ಲಿ ಅಮೂಲ್ಯ ಸಾಧನೆ ಮಾಡಿದ್ದಾರೆ. ದೇಶದಲ್ಲಿ ತಯಾರಿಸಲ್ಪಟ್ಟ ಔಷಧಿಗಳಿಗೆ ಹೊರ ದೇಶಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ 120 ದೇಶಗಳಿಗೆ 400ಕ್ಕೂ ಮಿಕ್ಕಿ ಔಷಧಿಗಳನ್ನು ರಪ್ತು ಮಾಡಲಾಗಿದೆ.
ಕರೋನಾ ಸಂದರ್ಭಗಳಲ್ಲಿ ವೈದ್ಯರು,ನರ್ಸಗಳು,ಲ್ಯಾಬ್ ಟಿಕ್ನೀಶಿಯನ್, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು,ಪೊಲೀಸ್,ಮಾಧ್ಯಮಗಳು, ವಾರೀಯರ್ಸ್ ಸೇರಿದಂತೆ ಇನ್ನೀತರರ ಕರ್ತವ್ಯ ನಿಷ್ಠೆಯ ಸೇವೆ ಪ್ರಶಂಸನೀಯ. ಹಿಂದಿನಿಂದಲೂ ವಿವಿಧ ತರಹದಲ್ಲಿ ಖಾಯಲೆಯನ್ನು ಹೊಂದಿದವರಿಗೆ ಕರೋನಾ ಸೋಂಕು ತಗುಲಿದ ಹಿನ್ನಲೆಯಲ್ಲಿ ಮರಣ ಹೊಂದಿದವರ ಪ್ರಮಾಣ ಹೆಚ್ಚಿದೆ.ಜನತೆ ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಮುಂದಿನ ಜೀವನ ನಡೆಸ ಬೇಕಾದ ಅವಶ್ಯತೆಯಿದೆ ಎಂದರು.
ಹೆಬ್ರಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಪೂಜಾರಿ ಶಿವಪುರ,ಉಪಾಧ್ಯಕ್ಷ ಎಸ್.ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ, ಜಿ.ಪಂ ಸದಸ್ಯೆ ಸುಪ್ರೀತಾ ಉದಯ ಕುಲಾಲ್, ಅಮಾಸೆಬೈಲು ಕ್ಷೇತ್ರ ತಾ.ಪಂ.ಸದಸ್ಯೆ ಜ್ಯೋತಿ ಪೂಜಾರಿ, ಕುಂದಾಪುರ ವಿಧಾನಸಭಾ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ನಿಕಟ ಪೂರ್ವಾಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ಹೆಂಗವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ ರಘುರಾಮ ಶೆಟ್ಟಿ ತೊಂಭತ್ತು,ಸದಸ್ಯ ಗಣಪು ನಾಯ್ಕ ಮರೂರು, ಸೇತುವೆ ನಿರ್ಮಾಣ ಗುತ್ತಿಗೆದಾರ ಕೆದೂರು ಸದಾನಂದ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ, ಗುತ್ತಿಗೆದಾರ ಸಂತೋಷ ಶೆಟ್ಟಿ ಯಳಂತೂರು, ತಾ.ಪಂ ಮಾಜಿ ಅಧ್ಯಕ್ಷೆ ದೀಪಿಕಾ ಸಂತೋಷ ಶೆಟ್ಟಿ, ಬೆಳ್ವೆ ಗ್ರಾಮ ಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ ಹಾಗೂ ಸದಸ್ಯರು, ಹಾಲಾಡಿ ಶಕ್ತಿ ಕೇಂದ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುದೀಪ್ ಶೆಟ್ಟಿ ಹಳ್ಳಿ, ದಯಾನಂದ ಶೆಟ್ಟಿ ಸೂರ್ಗೋಳಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಉಡುಪಿ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಎನ್.ಕೃಷ್ಣಾನಂದ,ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಲ್ವೀನ್ ಅಗೇರ್,ಸಹಾಯಕ ಇಂಜಿನಿಯರ್ ಮಿಥುನ್.ಪಿ ಶೆಟ್ಟಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ತಂತ್ರಿ ಶ್ರೀನಿವಾಸ ಬಾಯರಿ ಮರೂರು,ರಾಜೇಂದ್ರ ಐತಾಳ್ ಬೆಳ್ವೆ ನೇತ್ರತ್ವದಲ್ಲಿ ಪೂಜಾಧಿಗಳು ನಡೆಯಿತು.ಟಿ ರಘುರಾಮ ಶೆಟ್ಟಿ ತೊಂಭತ್ತು ಸ್ವಾಗತಿಸಿದರು.ಗಣೇಶ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು.