ಕಾಸರಗೋಡು, ಸೆ. 10 (DaijiworldNews/SM): ಜಿಲ್ಲೆಯಲ್ಲಿ ಗುರುವಾರ 140 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು, 138 ಮಂದಿಗೆ ಸಂಪರ್ಕದಿಂದ ಹಾಗೂ ಹೊರ ರಾಜ್ಯ ಮತ್ತು ವಿದೇಶದಿಂದ ಬಂದ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6818ಕ್ಕೆ ಏರಿಕೆಯಾಗಿದೆ. 2001 ಮಂದಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 6284 ಮಂದಿ ನಿಗಾದಲ್ಲಿದ್ದು, 1393 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.
ಪಳ್ಳಿಕೆರೆ, ಪುತ್ತಿಗೆ, ಮೀಂಜ ತಲಾ 2, ಮಂಜೇಶ್ವರ, ಅಜಾನೂರು, ಚೆಮ್ನಾಡ್ ತಲಾ 7, ಮಡಿಕೈ, ವರ್ಕಾಡಿ, ಬದಿಯಡ್ಕ, ಬೇಡಡ್ಕ, ಮೊಗ್ರಾಲ್ ಪುತ್ತೂರು, ಪೈವಳಿಕೆ, ಕಾರಡ್ಕ, ಕುತ್ತಿಕೋಲ್, ತ್ರಿಕ್ಕರಿಪುರ, ಕೊಡೋ ಬೇಳೂರು, ಚೆರ್ವತೂರು ತಲಾ 1, ಕಾಸರಗೋಡು, ಈಸ್ಟ್ ಎಳೇರಿಯಲ್ಲಿ ತಲಾ 6, ಮಧೂರು 13, ಕುಂಬಳೆ 4, ಉದುಮ 20, ಚೆಂಗಳ 9, ಕಾಞಂಗಾಡ್ 13, ನೀಲೇಶ್ವರ 9, ಕಿನಾನೂರು ಕರಿಂದಲ 11, ಪಿಲಿಕ್ಕೋಡು, ಪಡನ್ನ, ತಲಾ 3, ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಐವರಿಗೆ ಸೋಂಕು ದೃಢಪಟ್ಟಿದೆ.