ಕಾಸರಗೋಡು, ಸೆ. 11 (DaijiworldNews/MB) : ಸಿಪಿಎಂ ಕಾರ್ಯಕರ್ತ ಕುಂಬಳೆ ಶಾಂತಿಪಳ್ಳದ ಮುರಳಿ 35) ಕೊಲೆ ಪ್ರಕರಣದ ಪ್ರಮುಖ ಆರೋಪಿ ತಪ್ಪಿತಸ್ಥನೆಂದು ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಫು ನೀಡಿದ್ದು, ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಪ್ರಮುಖ ಆರೋಪಿ ಶರತ್ ರಾಜ್ ತಪ್ಪಿತಸ್ಥನಾಗಿದ್ದು, ಶಿಕ್ಷೆ ಸಂಜೆ ಘೋಷಿಸಲಿದೆ.
2017 ರ ಅಕ್ಟೋಬರ್ 17 ರಂದು ಕೃತ್ಯ ನಡೆದಿತ್ತು. ಸೀತಾಂಗೋಳಿ ಸಮೀಪ ತಂಡವು ಕಡಿದು ಕೊಲೆಗೈದಿತ್ತು. ಪ್ರಕರಣದಲ್ಲಿ ಶರತ್ ರಾಜ್ ಅಲ್ಲದೆ ದಿನೇಶ್, ವರದರಾಜ್, ಮಿಥುನ್ ಕುಮಾರ್, ನಿತಿನ್ ರಾಜ್, ಕಿರಣ್ ಕುಮಾರ್, ಮಹೇಶ್ ಮತ್ತು ಅಜಿತ್ ಕುಮಾರ್ ಸೇರಿದಂತೆ 8 ಮಂದಿಯನ್ನು ಬಂಧಿಸಿತ್ತು.