ಮಂಗಳೂರು, ಸೆ. 11 (DaijiworldNews/SM): ದ.ಕ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೆಚ್ಚಿನ ಪ್ರಕರಣಗಳು ಮಂಗಳೂರು ನಗರದಲ್ಲೇ ಪತ್ತೆಯಾಗುತ್ತಿವೆ. ಶುಕ್ರವಾರದಂದು ಮತ್ತೆ 446 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 248 ಮಂದಿ ಮಹಾನಗರ ವ್ಯಾಪ್ತಿಯವರಾಗಿದ್ದಾರೆ.

ಇಂದಿನ ಸೋಂಕಿತರ ಪೈಕಿ 170 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 177 ಐ ಎಲ್ ಐ ಪ್ರಕರಣ ದೃಢಪಟ್ಟಿದ್ದು, 11 ಸಾರಿ ಕೇಸ್ ಗಳಾಗಿವೆ. ಉಳಿದಂತೆ 88 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. 212 ಮಂದಿಯಲ್ಲಿ ಲಕ್ಷಣ ಸಹಿತ ಸೋಂಕು ಪತ್ತೆಯಾಗಿದ್ದರೆ, 234 ಮಂದಿಯಲ್ಲಿ ಎ ಸಿಂಟಮ್ಯಾಟಿಕ್ ಪಾಸಿಟಿವ್ ದೃಢಪಟ್ಟಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಮತ್ತೆ 446 ಮಂದಿಯಲ್ಲಿ ಸೋಂಕು
ಶುಕ್ರವಾರದಂದು ದ.ಕ. ಜಿಲ್ಲೆಯಲ್ಲಿ 197 ಮಂದಿ ಗುಣಮುಖ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರು 12609 ಮಂದಿ
ಜಿಲ್ಲೆಯಲ್ಲಿ ಮತ್ತೆ ಏಳು ಮಂದಿ ಕೊರೋನಾಗೆ ಬಲಿ
ದ.ಕ.ದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 434ಕ್ಕೆ ಏರಿಕೆ
ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವವರು 3515 ಮಂದಿ
ದ.ಕ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-116543 ಮಂದಿ
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ನೆಗೆಟಿವ್ ವರದಿ - 100216