ಕೋಲಾರ, ಮೇ 07 : ಮೈತ್ರಿ ಸರ್ಕಾರದ ಬಗೆ ಪದೇ ಪದೇ ವಿಭಿನ್ನ ನಿಲುವು ತಳೆಯುವ ಜೆಡಿಎಸ್ ಯಾವ ಪಕ್ಷವನ್ನು ಬೆಂಬಲಿಸಲಿದೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜೆಡಿಎಸ್ ಯಾವುದಾದರೊಂದು ಪಕ್ಷವನ್ನು ಆಯ್ಕೆ ಮಾಡಿ ನಿರ್ಧಾರ ತಳೆಯುವುದು ಸೂಕ್ತ ಎಂದು ಮಾಲೂರಿನಲ್ಲಿ ಇಂದು ನಡೆದ ರೋಡ್ ಶೋ ರಾಹುಲ್ ಗಾಂಧಿ ಹೇಳಿದ್ದಾರೆ. ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಲಿದೆಯೇ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬುದನ್ನು ರಾಜ್ಯದ ಜನರು ತಿಳಿಯಬೇಕಿದೆ ಎಂದರು.
ಇದೇ ವೇಳೆ ನರೇಂದ್ರ ಮೋದಿ ಅವರ ವಿರುದ್ದ ಕಿಡಿ ಕಾರಿದ ಅವರು ದೇಶದ ಪ್ರಧಾನಿಗಳು ಮೊಬೈಲ್ನಲ್ಲಿ ಸ್ಪೀಕರ್ ಮೋಡ್ ಮತ್ತು ಏರ್ಪ್ಲೇನ್ ಮೋಡ್ ಮಾತ್ರವೇ ಬಳಸುತ್ತಾರೆ; ಹೊರತು ವರ್ಕ್ ಮೋಡ್ ಬಳಸಲ್ಲ ಎಂದರು.
ಈ ಸಂದರ್ಭ ಸೈಕಲ್ ಏರಿ ರೋಡ್ ಶೋ ನಡೆಸಿದ ರಾಹುಲ್ ಗಾಂಧಿ ನಕಲಿ ಸಿಲಿಂಡರ್ ಹಿಡಿದು ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ಜೈಲಿಗೆ ಹೋಗಿ ಬಂದಿರುವ ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಂಡು ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ರೆಡ್ಡಿ ಸಹೋದರರು 35 ಸಾವಿರ ಕೋಟಿ ರೂ. ದೋಚಿಸಿದ್ದಾರೆ. ಅಂತಹವರನ್ನು ಮತ್ತೆ ವಿಧಾನಸೌಧಕಕ್ಕೆ ಕರೆದುಕೊಳ್ಳಲು ಉತ್ಸುಕರಾಗದ್ದಾರೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಏಕೆ ಏನನ್ನೂ ಹೇಳಲ್ಲ ಎಂದು ಪ್ರಶ್ನಿಸಿದರು.