ಉಳ್ಳಾಲ, ಸೆ.12(DaijiworldNews/HR): ತೊಕ್ಕೊಟ್ಟುವಿನಿಂದ ಕೇರಳ ಕಡೆಗೆ ಕಾರಿನಲ್ಲಿ ಅಕ್ರಮ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ದಕ್ಷಿಣ ಪೊಲೀಸ್ ಉಪವಿಭಾಗದ ಎಸಿಪಿ ನಿರ್ದೇಶನದಂತೆ ಉಳ್ಳಾಲ ಠಾಣಾಧಿಕಾರಿ ನೇತೃತ್ವದಲ್ಲಿ ಬಂಧಿಸಲಾಗಿದೆ. ಆರೋಪಿಗಳಿಂದ 26 ಬಾಕ್ಸುಗಳಲ್ಲಿದ್ದ 225 ಲೀ ಮದ್ಯ ಹಾಗೂ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.





ಬಂದ್ಯೋಡು ಮಂಗಳಪಾಡಿಯ ರೆಜಿನ್ (23) ಮತ್ತು ಧೀರಜ್ (21) ಎಂಬವರನ್ನು ಬಂಧಿಸಲಾಗಿದೆ.
ಇಬ್ಬರು ದಾಖಲೆಗಳಿಲ್ಲದ ಮಾರುತಿ 800 ಕಾರಿನಲ್ಲಿ ಅಕ್ರಮ ಮದ್ಯ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕೋಟೆಕಾರು ಅಜ್ಜನಕಟ್ಟೆ ಬಳಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೋಟೆಕಾರು ಬಳಿ ಕಾರು ನಿಲ್ಲಿಸಲು ಸೂಚಿಸಿದಾಗ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಸುತ್ತುವರಿದು ಕಾರಿಗೆ ಅಡ್ಡಗಟ್ಟಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತೊಕ್ಕೊಟ್ಟುವಿನಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. 225 ಲೀಟರ್ ಅಕ್ರಮ ಮದ್ಯ ಮತ್ತು ಬಿಳಿ ಬಣ್ಣದ ಮಾರುತಿ 800 ವಾಹನ ಸೇರಿದಂತೆ ಒಟ್ಟು ರೂ. 2 ಲಕ್ಷ ಮೊತ್ತದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.