ಮಾಹೆ, ಮೇ 08 : ಗಂಟೆಗಳ ಅವಧಿಯಲ್ಲಿ ಅರೆಸ್ಸೆಸ್ ಮತ್ತು ಸಿಪಿಎಂ ಕಾರ್ಯಕರ್ತರಿಬ್ಬರನ್ನು ದುಷ್ಕರ್ಮಿಗಳ ತಂಡವೊಂದು ಬರ್ಬರವಾಗಿ ಹತ್ಯೆಗೈದ ಘಟನೆ ಕಾಸರಗೋಡಿನ ಕಣ್ಣೂರಿನಲ್ಲಿ ನಡೆದಿದೆ. ಮಾಹೆ ಎಂಬಲ್ಲಿ ಸಿಪಿಎಂ ಕಾರ್ಯಕರ್ತ ಬಾಬು ಎಂಬವರನ್ನು ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿತ್ತು ಪೇಟೆಯಿಂದ ಮನೆಗೆ ತೆರಳುತ್ತಿದ್ದಾಗ ವಾಹನವೊಂದರಲ್ಲಿ ಬೆನ್ನಟ್ಟಿ ಬಂದ ತಂಡ ಈ ಕೃತ್ಯ ಎಸಗಿತ್ತು.
ಈ ಘಟನೆ ನಡೆದು ಕೆಲವೇ ಗಂಟೆಗಳ ಅವಧಿಯಲ್ಲಿ ಆಟೋ ಚಾಲಕ, ಬಿಜೆಪಿ ಕಾರ್ಯಕರ್ತ ಶಮೋಜೆ (45) ಎಂಬವರನ್ನೂ ಕೊಲೆ ಗೈಯಲಾಗಿದೆ. ಕೃತ್ಯ ಖಂಡಿಸಿ ಸಿಪಿಎಂ ಮತ್ತು ಬಿಜೆಪಿ ಇಂದು ಕಣ್ಣೂರು ಜಿಲ್ಲೆ ಮತ್ತು ಮಾಹೆ ಯಲ್ಲಿ ಹರತಾಳಕ್ಕೆ ಕರೆ ನೀಡಿದೆ . ಕೊಲೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.