ಮಂಗಳೂರು, ಸೆ.12(DaijiworldNews/HR): ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ, ಪ್ರತೀಕ್ ಶೆಟ್ಟಿಯನ್ನು ಬಂಧಿಸಿ ಬೆಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು ಮೂಲದ ಮ್ಯಾನೇಜ್ಮೆಂಟ್ ನಡೆಸುತಿದ್ದ ಪೃಥ್ವಿ ಶೆಟ್ಟಿ, ಬೆಂಗಳೂರಿನಲ್ಲಿ ನಿವಾಸ ಹೊಂದಿದ್ದು, ಹೈಫೈ ಪಾರ್ಟಿಗಳಿಗೆ, ಮಂಗಳೂರಿನ ಪಾರ್ಟಿಗಳಿಗೂ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು. ಪೃಥ್ವಿ ಶೆಟ್ಟಿಯ ವಿಚಾರಣೆ ಬಳಿಕವೇ ಸಂಜನಾ ಬಂಧನ ಆಗಿದ್ದು, ಇದೀಗ ಸಿಸಿಬಿ ವಿಚಾರಣೆಯಲ್ಲಿ ಪೃಥ್ವಿ ಶೆಟ್ಟಿ ಹಾಜರಾಗಿದ್ದಾಳೆ.
ಇನ್ನು ಮತ್ತೊರ್ವ ಆರೋಪಿ ಎಂಜಿನಿಯರ್ ಪದವೀಧರನಾಗಿರುವ ಪ್ರತೀಕ್ ಶೆಟ್ಟಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ, ತಿಂಗಳಿಗೆ ೧ ಲಕ್ಷ ಸಂಬಳಕ್ಕೆ ದುಡಿಯುತ್ತಿದ್ದಾತ, ಕೈಯಲ್ಲಿ ಹಣ ಬರುತ್ತಿದ್ದಂತೆ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದು, ನೈಜೀರಿಯಾ ಪ್ರಜೆಗಳ ಸ್ನೇಹ, ಡ್ರಗ್ಸ್ ದಂಧೆಯಲ್ಲಿದ್ದ ಪ್ರತೀಕ್ ಕೆಲ ವರ್ಷಗಳಲ್ಲೆ ಕುಖ್ಯಾತ ಪೆಡ್ಲರ್ ಆಗಿ ಬೆಳೆದ. ಎಂಡಿಎಂ, ಎಲ್ಎಸ್ಡಿ, ಕೊಕೇನ್ ಗ್ರಾಹಕರಿಗೆ ಪೂರೈಸುತ್ತಿದ್ದು, 2018ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಪ್ರತೀಕ್ ಶೆಟ್ಟಿ ಬಂಧನ ಆಗಿತ್ತು. ಬಳಿಕ ಜೈಲಿಗೆ ಹೋಗಿ, ಜಾಮೀನು ಮೇಲೆ ಹೊರಬಂದಿದ್ದ. ಜೈಲಿನಿಂದ ಬಂದ ಬಳಿಕವೂ ಡ್ರಗ್ಸ್ ದಂಧೆ ಮುಂದುವರಿಸಿದ್ದ ಇದೀಗ ಮತ್ತೆ ಪ್ರತೀಕ್ ಶೆಟ್ಟಿಯನ್ನು ಬಂಧಿಸಿದ್ದು, ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.