ಬಜಪೆ, ಸೆ 12(DaijiworldNews/PY): ಡೆತ್ ನೋಟ್ ಬರೆದಿಟ್ಟು ವಿವಾಹಿತೆಯೋವ೯ರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಜಪೆಯಲ್ಲಿ ಶುಕ್ರವಾರ ನಡೆದಿದೆ.

ಮೃತರನ್ನು ಬಜಪೆಯ ಜ್ಯುವೆಲ್ಲರಿ ಶಾಪ್ ವೊಂದರ ಮಾಲಕ ಅಶೋಕ ಆಚಾಯ೯ ಎನ್ನುವವರ ಪುತ್ರಿ ಶಿಲ್ಪಾ(28) ಎಂದು ತಿಳಿದುಬಂದಿದೆ.
ಶಿಲ್ಪಾ ಅವರು ಶುಕ್ರವಾರ ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಗೆ 10 ತಿಂಗಳ ಮಗು ಇದ್ದು, ಕೆಲವು ದಿನಗಳ ಹಿಂದೆ ಇವರು ತವರುಮನೆಗೆ ಬಂದಿದ್ದರು. ಘಟನೆಯ ಬಗ್ಗೆ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.