ಮಂಗಳೂರು, ಸೆ. 11 (DaijiworldNews/SM): ದ.ಕ. ಜಿಲ್ಲೆಯಲ್ಲಿ ಶನಿವಾರದಂದು ಮತ್ತೆ 401 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 16959ಕ್ಕೆ ಏರಿಕೆಯಾಗಿದೆ.

ಶನಿವಾರದಂದು 97 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 210 ಮಂದಿಯಲ್ಲಿ ಐಎಲ್ ಐ ಕೇಸ್ ದೃಢಪಟ್ಟಿದೆ. 18 ಮಂದಿಯಲ್ಲಿ ಸಾರಿ ಪ್ರಕರಣಗಳು ದೃಢವಾಗಿವೆ. 76 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಶನಿವಾರದಂದು ಮತ್ತೆ ಮಂಗಳೂರು ತಾಲೂಕಿನಲ್ಲೂ ಅತ್ಯಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಪತ್ತೆಯಾದ ಒಟ್ಟು ಸೋಂಕಿತರಲ್ಲಿ 227 ಮಂದಿ ಮಂಗಳೂರು ತಾಲೂಕಿನವರಾಗಿದ್ದಾರೆ. ಬಂಟ್ವಾಳದ 47, ಪುತ್ತೂರು ತಾಳೂಕಿನ 52, ಸುಳ್ಯದ 30, ಬೆಳ್ತಂಗಡಿ ತಾಲೂಕಿನ 24 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ದ.ಕ. ಜಿಲ್ಲೆಯ ಇಂದಿನ ಕೊರೋನಾ ವರದಿ:
ಒಟ್ಟು ಪರೀಕ್ಷೆಗೆ ಒಳಪಟ್ಟವರು 118886 ಮಂದಿ
ದ.ಕ. ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ ನೆಗೆಟಿವ್ ವರದಿ 101927
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು 16959
ಶನಿವಾರದಂದು ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು 401
ಶನಿವಾರದಂದು ಜಿಲ್ಲೆಯಲ್ಲಿ ಗುಣಮುಖರಾದವರು 204 ಮಂದಿ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾಗಿ ಬಿಡುಗಡೆಗೊಂಡವರು 12813 ಮಂದಿ
ಜಿಲ್ಲೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು 3707 ಮಂದಿ
ಜಿಲ್ಲೆಯಲ್ಲಿ ಶನಿವಾರದಂದು ಮತ್ತೆ ಐವರು ಸೋಂಕಿಗೆ ಬಲಿ
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಟ್ಟು ಬಲಿಯಾದವರು 439 ಮಂದಿ