ಕಾರ್ಕಳ, ಸೆ 11 (DaijiworldNews/SM): ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಮಾಳ ಮಾಜಲ್ತಾರ್ನ ಯುವತಿ ತನ್ನ ಪ್ರಿಯಕರನಾಗಿರುವ ಅಸ್ಸಾಂ ಮೂಲದ ಭುವನ ಎಂಬಾತನೊಂದಿಗೆ ತಮಿಳುನಾಡಿದ ಕೃಷ್ಣಗಿರಿ ಎಂಬಲ್ಲಿ ಪತ್ತೆಯಾಗಿದ್ದಾಳೆ.

ಅವರಿಬ್ಬರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ಪೊಲೀಸರ ತಂಡವು ಕಾರ್ಕಳಕ್ಕೆ ಕರೆತರಲಾಗುತ್ತಿದೆ.
ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಸಪ್ಪೆಂಬರ್ ೨ರಂದು ನಾಪತ್ತೆಯಾಗಿದ್ದಳು. ಆಕೆಗೆ ಸ್ವಜಾತಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಆ ಯುವಕನೊಂದಿಗೆ ವಿವಾಹವಾಗಲು ಆಕೆಗೆ ಇಷ್ಟವಿರಲಿಲ್ಲ. ಈ ಕುರಿತು ಆಕೆ ತನ್ನ ತಂಗಿಗೆ ಕರೆ ಮಾಡಿ ನಿಶ್ಚಿತವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಮನೆಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಳು.
ಈ ನಡುವೆ ಅಕ್ಕನ ಮಾತು ಕೇಳಿ ಅಘಾತಕ್ಕೊಳಗಾದ ತಂಗಿ ಸ್ಥಳದಲ್ಲಿಯೇ ಕುಸಿದು ಬಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಳು.