ಕುಂದಾಪುರ, ಮೇ 08 : ಸೋಮವಾರವಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಡಾಮಕ್ಕಿ ಪಂಚಾಯತ್ ಅಧ್ಯಕ್ಷ ರಾಜು ಕುಲಾಲ ಎಂಬವರ ಮನೆ ಮೇಲೆ ಕಿಡಿಗೇಡಿಗಳ ತಂಡವೊಂದು ಕಲ್ಲು ತೂರಾಟ ನಡೆಸಿ ವಿದ್ಯುತ್ ಕಡಿತಗೊಳಿಸಿದ ಘಟನೆ ಮೇ 07 ರ ಸೋಮವಾರ ರಾತ್ರಿ ಕುಂದಾಪುರದಲ್ಲಿ ನಡೆದಿದೆ.
ಮನೆಯ ಕರೆಂಟ್ ಲೈನ್ ಕತ್ತರಿಸಿ, ಕಾಂಪೌಂಡ್ ಮತ್ತು ಮನೆಯ ಮೇಲೆ ಕಲ್ಲು ತೂರಾಟ ನಡೆಸಿ, ಮನೆಯ ಗಾಜುಗಳನ್ನು ಪುಡಿ ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ರಾಜು ಕುಲಾಲ ನಿನ್ನೆಯಷ್ಟೇ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು ಈ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮನೆಗೆ ಹಾನಿ ಮಾಡಿದ್ದಾರೆ ಎಂಬ ಶಂಕೆಯನ್ನು ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ. ಮನೆಗೆ ಕುಂದಾಪುರ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಭೇಟಿ ನೀಡಿದ್ದಾರೆ.