ಕಾಸರಗೋಡು, ಸೆ. 13 (DaijiworldNews/MB) : ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಕಾರ್ಮಿಕನೋರ್ವ ಮೃತಪಟ್ಟ ದಾರುಣ ಘಟನೆ ನೀಲೇಶ್ವರ ಬಂಗಳಂ ಎಂಬಲ್ಲಿ ನಡೆದಿದೆ.

ರಘುನಾಥ್ ( 55) ಮೃತಪಟ್ಟವರು.
ಶನಿವಾರ ಸಂಜೆ ಕೆಲಸ ಮುಗಿಸಿ ಮರಳುತ್ತಿದ್ದಾಗ ಮನೆ ಬಳಿ ನೀರು ತುಂಬಿದ ಕೆಂಗಲ್ಲು ಕೋರೆಗೆ ಬಿದ್ದಿದ್ದು ಇದನ್ನು ಗಮನಿಸಿದ್ದ ಪತ್ನಿ ಬೊಬ್ಬೆ ಹಾಕಿದ್ದಾರೆ. ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ.
ಮೃತದೇಹವನ್ನು ಕೊರೊನಾ ತಪಾಸಣೆ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.