ಬೆಳ್ತಂಗಡಿ, ಸೆ. 13 (DaijiworldNews/MB) : ಲಾರಿ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟಿ ಚಾಲಕ ಸಾವನ್ನಪ್ಪಿದ ಘಟನೆ ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಮೃತ ಸ್ಕೂಟಿ ಚಾಲಕನನ್ನು ಗರ್ಡಾಡಿ ನಿವಾಸಿ ಗಿರೀಶ್ ಮೂಲ್ಯ ಎಂದು ಗುರುತಿಸಲಾಗಿದೆ.
ಲಾರಿಯು ಅಳದಂಗಡಿ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಸ್ಕೂಟಿ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಸ್ಕೂಟಿ ಚಾಲಕ ಲಾರಿಯ ಅಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.