ಮಂಗಳೂರು, ಮೇ 8: ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗಾಗಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೈಗೊಂಡ ಭದ್ರತಾ ವ್ಯವಸ್ಥೆಯ ಬಗ್ಗೆ ಮೇ 08 ರ ಮಂಗಳವಾರ ನಗರ ಪೊಲೀಸ್ ಆಯುಕ್ತ ವಿಫುಲ್ ಕುಮಾರ್ ಪತ್ರಿಕಾಗೋಷ್ಟಿ ನಡೆಸಿ ವಿವರ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ ಮಂಗಳೂರು, ಮಂಗಳೂರು ನಗರ ಉತ್ತರ, ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 877 ಬೂತ್ಗಳಿವೆ. ಇದರಲ್ಲಿ ಮಂಗಳೂರು ನಗರ ಉತ್ತರ- 245, ಮಂಗಳೂರು ದಕ್ಷಿಣ-238 , ಮಂಗಳೂರು- 173, ಮೂಡುಬಿದಿರೆ-221 ಬೂತುಗಳನ್ನು ಒಳಗೊಂಡಿದೆ. ಈ ಪೈಕಿ 201 ಬೂತುಗಳು ಸೂಕ್ಷ್ಮ ಹಾಗೂ 676 ಬೂತ್ಗಳನ್ನು ಸಹಜ ಬೂತು ಎಂದು ಗುರುತಿಸಲಾಗಿದೆ. 26 ಚೆಕ್ಪೋಸ್ಟ್ಗಳನ್ನು ರಚಿಸಲಾಗಿದ್ದು, ಇದರಲ್ಲಿ ಆರು ಅಂತರ್ರಾಜ್ಯ ಗಡಿಭಾಗದಲ್ಲಿ ಬರುತ್ತದೆ
ವೆ. 14 ಫ್ಲೈಯಿಂಗ್ ಸ್ಕ್ವ್ಯಾಡ್ಗಳು ಕಾರ್ಯನಿರ್ವಹಿಸುತ್ತಿದ್ದು, ಭದ್ರತೆಗಾಗಿ 11 ಸಿಎಪಿಎಫ್ ತುಕಡಿ, ಪಿಎಪಿ, ಹೋಂಗಾರ್ಡ್ ಸಹಿತ 2,700 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದವರು ಹೇಳಿದರು. ಚುನಾವಣೆಯ ಹಿನ್ನೆಲೆಯಲ್ಲಿ 1,908 ಶಸ್ತ್ರಾಸ್ತ ಠೇವಣಿ, 753 ಸೆಕ್ಯುರಿಟಿ ಕೇಸ್ ದಾಖಲಾಗಿವೆ. 2,756 ರೌಡಿಗಳ ಮೇಲೆ ಖಾಕಿ ಪಡೆ ನಿಗಾ ಇಟ್ಟಿದೆ. ಇದಲ್ಲದೆ, ಸಮಾಜಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ 90 ಮಂದಿಯ ಮೇಲೂ ನಿಗಾ ಇಡಲಾಗಿದೆ ಎಂದು ಆಯುಕ್ತರು ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ
ಪತ್ರಿಕಾಗೋಷ್ಟಿಯಲ್ಲಿ ಡಿಸಿಪಿ ಹನುಮಂತರಾಯ, ಡಿಸಿಪಿ ಉಮಾ ಪ್ರಶಾಂತ್ ಉಪಸ್ಥಿತರಿದ್ದರು.