ಮಂಗಳೂರು, ಸೆ. 13 (DaijiworldNews/SM): ಉಡುಪಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14 ಸಾವಿರ ದಾಟಿದೆ. ರವಿವಾರದಂದು ಉಡುಪಿಯಲ್ಲಿ ಮತ್ತೆ 126 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14038ಕ್ಕೆ ಏರಿಕೆಯಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ರವಿವಾರದಂದು 124 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 7194ಕ್ಕೆ ಏರಿಕೆಯಾಗಿದೆ.

ಉಡುಪಿ ಜಿಲ್ಲೆಯ ರವಿವಾರದ ಕೊರೋನಾ ವರದಿ:
ಉಡುಪಿಯಲ್ಲಿ ಮತ್ತೆ 126 ಮಂದಿಯಲ್ಲಿ ಸೋಂಕು ಪತ್ತೆ
ರವಿವಾರ 30 ಮಂದಿಯಲ್ಲಿ ಸಂಪರ್ಕದಿಂದ ಸೋಂಕು
46 ಐಎಲ್ ಐ ಪ್ರಕರಣಗಳು, 11 ಸಾರಿ ಕೇಸ್ ಗಳು
33 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
ಜಿಲ್ಲೆಯಲ್ಲಿ 69 ಮಂದಿಯಲ್ಲಿ ಲಕ್ಷಣ ಸಹಿತ ಸೋಂಕು
ರವಿವಾರದಂದು ಉಡುಪಿಯಲ್ಲಿ 154 ಮಂದಿ ಗುಣಮುಖ
ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿರುವವರು 1732 ಮಂದಿ
ಉಡುಪಿಯಲ್ಲಿ ಒಟ್ಟು ಕೊರೋನಾ ಸಾವು-130
ಕಾಸರಗೋಡಿನಲ್ಲಿ ಮತ್ತೆ 124 ಮಂದಿಗೆ ಸೋಂಕು:
ಕಾಸರಗೋಡು ಜಿಲ್ಲೆಯಲ್ಲಿ ಇಂದು 124 ಮಂದಿಗೆ ಕೊರೋನಾ ಸೋಂಕು ದ್ರಢಪಟ್ಟಿದ್ದು, 120 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಮೂವರು ವಿದೇಶ ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಓರ್ವನಿಗೆ ಸೋಂಕು ಪತ್ತೆಯಾಗಿದೆ. 182 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 7194 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1953 ಮಂದಿ ಈಗ ಚಿಕಿತ್ಸೆಯಲ್ಲಿದ್ದಾರೆ. 5243 ಮಂದಿ ನಿಗಾದಲ್ಲಿದ್ದಾರೆ.
ರವಿವಾರದಂದು ಪತ್ತೆಯಾದ ಸೋಂಕಿತರ ಪೈಕಿ, ಪುಲ್ಲೂರು ಪೆರಿಯ , ಚೆರ್ವತ್ತೂರು , ಮಂಗಲ್ಪಾಡಿ , ಮೀಂಜ, ಎಣ್ಮಕಜೆ , ಮೊಗ್ರಾಲ್ ಪುತ್ತೂರು , ಕುತ್ತಿಕೋಲು , ಕುಂಬಳೆ , ತ್ರಿಕ್ಕರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಂದು ಚೆಮ್ನಾಡ್ 4, ಕಿನಾನೂರು ಕರಿಂದಲ 8, ಕಾಞಂಗಾಡ್ 14, ಮಂಜೇಶ್ವರ , ಬೇಡಡ್ಕ , ಪಡನ್ನ ತಲಾ 2, ನೀಲೇಶ್ವರ 9, ಪನತ್ತಡಿ , ಬದಿಯಡ್ಕ ತಲಾ 3, ಈಸ್ಟ್ ಎಳೇರಿ 18, ಮುಳಿಯಾರು 6, ಅಜಾನೂರು 9, ಪಳ್ಳಿಕೆರೆ , ಕಯ್ಯೂ ರು ಚಿಮೇನಿ ತಲಾ 7, ಚೆಂಗಳ 8, ಮಧೂರು , ಪುತ್ತಿಗೆ ತಲಾ 5 ಮಂದಿಗೆ ಸೋಂಕು ದೃಢಪಟ್ಟಿದೆ.