ಮಂಗಳೂರು, ಸೆ 13 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹದಿನೇಳು ಸಾವಿರ ದಾಟಿದೆ. ರವಿವಾರದಂದು ದ.ಕ. ಜಿಲ್ಲೆಯಲ್ಲಿ 404 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 17363ಕ್ಕೆ ಏರಿಕೆಯಾಗಿದೆ.

111 ಮಂದಿಯಲ್ಲಿ ರವಿವಾರದಂದು ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 192 ಮಂದಿಯಲ್ಲಿ ಐ ಎಲ್ ಐ ಪ್ರಕರಣ ಪತ್ತೆಯಾಗಿದ್ದು, 20 ಮಂದಿಯಲ್ಲಿ ಸಾರಿ ಕೇಸ್ ಕಂಡುಬಂದಿದೆ. ಉಳಿದಂತೆ 81 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಒಟ್ಟು ಸೋಂಕಿತರ ಪೈಕಿ ಅತ್ಯಧಿಕ 212 ಮಂದಿ ಮಂಗಳೂರು ತಾಲೂಕಿನವರಾಗಿದ್ದಾರೆ.
ರವಿವಾರದ ದ.ಕ. ಜಿಲ್ಲೆಯ ಕೊರೋನಾ ವರದಿ:
ರವಿವಾರದಂದು ದ.ಕ. ಜಿಲ್ಲೆಯಲ್ಲಿ 404 ಮಂದಿಯಲ್ಲಿ ಸೋಂಕು
ದ.ಕ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-121093 ಮಂದಿ
ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ ನೆಗೆಟಿವ್ ಪ್ರಕರಣಗಳು- 103730
ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು-17363
ರವಿವಾರದಂದು ಜಿಲ್ಲೆಯಲ್ಲಿ ಮತ್ತೆ 174 ಮಂದಿ ಗುಣಮುಖ
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು 12987 ಮಂದಿ
ಸದ್ಯ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 3934 ಮಂದಿ
ರವಿವಾರದಂದು ಮೂವರು ಸೋಂಕಿಗೆ ಬಲಿ
ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರು-442