ಮಂಗಳೂರು, ಸೆ. 13 (DaijiworldNews/SM): ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದವರಿಗೆ ಅಭಿನಂದನಾ ಕಾರ್ಯಕ್ರಮ ಬದ್ರಿಯಾನಗರದ ಅಲ್ ಮಸ್ಜಿದುಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಬದ್ರಿಯಾ ಜುಮಾ ಮಸೀದಿ ದೆಮ್ಮಲೆ ಮಲ್ಲೂರಿನ ಖತೀಬರಾದ ಸಲೀಂ ಅರ್ಶದಿ ಕಜೆಮಾರು ಮತ್ತು ಉಪಾಧ್ಯಕ್ಷರಾಗಿ ಅಲ್ ಮಸ್ಜಿದುಲ್ ಬದ್ರಿಯಾ ಜುಮ್ಮಾ ಮಸೀದಿ ಬದ್ರಿಯಾನಗರದ ಖತೀಬರಾದ ಕೆ.ಎಸ್. ಅಹ್ಮದ್ ದಾರಿಮಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಮಂಗಳೂರು ಸರ್ಜ್ ಟ್ರೇಡರ್ಸ್ ಮುಖ್ಯಸ್ಥ ಹೈದರ್ ಆಲಿ, ಪರಸ್ಪರ ಪ್ರೀತಿ ಸಹಬಾಳ್ವೆ ಸಹೋದರತೆಯ ಜೀವನದೊಂದಿಗೆ ಆಧ್ಯಾತ್ಮ ಜೀವನ ನಡೆಸುವ ಸಲುವಾಗಿ ಈ ಜಗತ್ತಿನಲ್ಲಿ ಮನುಷ್ಯನ ಸೃಷ್ಟಿಯಾಗಿದೆ. ನಾವು ಈ ಜೀವನದಲ್ಲಿ ಪರಸ್ಪರ ಒಂದಾಗಿ ಸಮುದಾಯ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದರು.
ಕಾರ್ಯಕ್ರಮದಲ್ಲಿ ಮಲ್ನಾಡ್ ಟೀ ಟ್ರೇಡರ್ಸ್ನ ನಿಝಾಮುದ್ದೀನ್ ಚಿಕ್ಕಮಗಳೂರು, ಮಲ್ಲೂರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ಎಂಕೆ ಯೂಸುಫ್ ಬದ್ರಿಯಾ ನಗರ, ದೆಮ್ಮಲೆ ಜುಮ್ಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಶರೀಫ್, ಸೈಯದ್ ಹೈದ್ರೋಸ್ ಜುಮ್ಮಾ ಮಸೀದಿ ಉದ್ದಬೆಟ್ಟು ಇದ್ರ ಖತೀಬರಾದ ಅಬ್ದುಲ್ ಖಾದರ್ ಮುನವ್ವರಿ, ನೂರುಲ್ ಹುದಾ ಮಸೀದಿ ಬದ್ರಿಯಾ ನಗರ ಇದ್ರ ಅಧ್ಯಾಪಕರಾದ ಯು.ಕೆ ಮಹಮ್ಮದ್ ಮುಸ್ಲಿಯಾರ್, ಉದ್ದಬೆಟ್ಠು ಜುಮ್ಮಾ ಮಸೀದಿ ಅಧ್ಯಕ್ಷರಾದ ಎಂ ಇ ಮಹಮ್ಮದ್, ಉದ್ಯಮಿ ಎ.ಕೆ ಉಸ್ಮಾನ್ ಬದ್ರಿಯಾ ನಗರ, ಸಿರಾಜುಲ್ ಹುದಾ ದಫ್ ಕಮೀಟಿ ಅಧ್ಯಕ್ಷರಾದ ಎ.ಕೆ ಸಾಲಿ ಮತ್ತಿತರರು ಉಪಸ್ಥಿತರಿದ್ದರು.