ಮಂಗಳೂರು, ಸೆ. 14 (DaijiworldNews/MB) : ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಅಡ್ಯಾರು ಕಟ್ಟೆಯ ಬಳಿ ನಡೆದಿದೆ.

ಮೃತ ಮಹಿಳೆಯನ್ನು ಅಳಪೆ ಪಡೀಲ್ ನಿವಾಸಿ 48 ವರ್ಷ ಪ್ರಾಯದ ಮಾಲತಿ ಎಂದು ಗುರುತಿಸಲಾಗಿದೆ.
ಬಸ್ಸಿನಿಂದ ಇಳಿದ ಮಹಿಳೆ ಅಡ್ಯಾರ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್ ಮಹಿಳೆಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಇನ್ನು ಬೈಕ್ ಚಾಲಕನಿಗೆ ಹಾಗೂ ಹಿಂಬದಿ ಸವಾರರಾದ ಬೈಕ್ ಚಾಲಕನ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ
ಈ ಬಗ್ಗೆ ನಾಗೋರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.