ಮಳವಳ್ಳಿ, ಮೇ 08: ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನರೇಂದ್ರ ಮೋದಿ ಪರ ಪ್ರಚಾರ ಮಾಡಿದ್ದಾರೆ. ಮೋದಿ ಅವರಿಗೆ ಅವರಿಗೆ ಮತ ಹಾಕಿದರೆ ತಮಗೆ ಮತ ಹಾಕಿದಂತೆ ಎಂದು ಹೇಳಿ ಯಡವಟ್ಟು ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಸ್ವಾಮಿ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಿಎಂ ಸಿದ್ದರಾಮಯ್ಯ , ಭಾಷಣ ಮಾಡುತ್ತಾ ನರೇಂದ್ರ ಸ್ವಾಮಿಗೆ ಮತ ಹಾಕಿ ಎಂದು ಹೇಳುವ ಬದಲು, ನರೇಂದ್ರ ಮೋದಿಗೆ ಮತ ಹಾಕಿ ಎಂದು ಹೇಳಿದ್ದಾರೆ. ಈ ಸಂದರ್ಭ ಅಲ್ಲಿ ನೆರೆದಿದ್ದ ಜನ ಶಿಳ್ಳೆ ಹಾಕಿ ಮೋದಿ ಅಲ್ಲ ಸ್ವಾಮಿ, ನರೇಂದ್ರ ಸ್ವಾಮಿ ಅನ್ನಿ ಅಂದಿದ್ದಾರೆ. ಆಗ ಎಚ್ಚೆತ್ತ ಸಿದ್ದರಾಮಯ್ಯ ತಪ್ಪು ತಿದ್ದಿಕೊಂಡು ನರೇಂದ್ರ ಸ್ವಾಮಿಗೆ ಮತ ಹಾಕಿ ಎಂದರಲ್ಲದೆ, 'ಮಳವಳ್ಳಿಗೆ ನರೇಂದ್ರ ಸ್ವಾಮಿ, ಮೋದಿ ಆ ಕಡೆ ಗುಜರಾತಿಗೆ’ ಎಂದರು. ಹೀಗೆ ಭಾಷಣದುದ್ದಕ್ಕೂ ಸಿಎಂ ಅವರ ಟಂಗ್ ಸ್ಲಿಪ್ ಆಗಿ ,ಮೋದಿ ಜಪ ಮಾಡಿದರು. ಸಿದ್ದರಾಮಯ್ಯ ಬಾಷಣದ ವೀಡಿಯೋ ಇಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.