ಉಡುಪಿ, ಸೆ.14 (DaijiworldNews/SM): ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬಲವಾದ ಹಿಡಿತಹೊಂದಿದೆ. ಬೂತ್ ಮಟ್ಟದಿಂದಲೇ ಕಾಂಗ್ರೆಸ್ ಹಿಡಿತವನ್ನು ತೆಗೆಯಬೇಕು. ಕಾಂಗ್ರೆಸ್ ಸೋಲಿಸಲು ನಿರಂತರವಾದ ಹೋರಾಟ ನಡೆಸಬೇಕು. ಮೋರ್ಚಾ ಸದಸ್ಯರು ಸೇವೆ ಸಲ್ಲಿಸಲು ಮೂರು ವರ್ಷಗಳ ಅವಧಿಯನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾದಲ್ಲಿ, ಫಲಿತಾಂಶ ಬದಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮುದಾಯವನ್ನು ಒಂದುಗೂಡಿಸುವುದು ಅಂದುಕೊಂಡಷ್ಟು ಸುಲಭದ ಮಾತಲ್ಲ. ಎಸ್ಸಿ/ಎಸ್ಟಿ ಸಮುದಾಯವನ್ನು ಕಾಂಗ್ರೆಸ್ ಮತ ಬ್ಯಾಂಕಿಂಗ್ಗೆ ಬಳಸಿಕೊಂಡಿತ್ತು. ಆದರೆ ಇಂದಿನ ಪೀಳಿಗೆಯವರು ಸತ್ಯವನ್ನು ಅರಿತುಕೊಂಡಿದ್ದಾರೆ. ಮೋದಿಯ ತತ್ವಗಳು, ಅವರ ನಾಯಕತ್ವ, ಮೋದಿ ಮತ್ತು ಕೇಂದ್ರ ಸರ್ಕಾರದ ಯೋಜನೆಗಳತ್ತ ಆಕರ್ಷಿತರಾಗಿದ್ದಾರೆ ಎಂದರು.
ಇನ್ನು ಬಿಜೆಪಿ ಪಕ್ಷ ಎಂದಿಗೂ ಕುಟುಂಬ ರಾಜಕಾರಣ ಅನುಸರಿಸುವುದಿಲ್ಲ. ಪಕ್ಷ ಹೊಸ ಮುಖಗಳಿಗೆ ಹಾಗೂ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಬಿಜೆಪಿ ಪ್ರಬಲ ರಾಷ್ಟ್ರವನ್ನು ನಿರ್ಮಿಸುವುದರ ಜೊತೆಗೆ ಪಕ್ಷವನ್ನು ನಿರ್ಮಿಸುತ್ತಿದೆ. ಇದರ ಮುಖ್ಯ ಉದ್ದೇಶವೆಂದರೆ ಜನಸಾಮಾನ್ಯ ಅಥವಾ ಸಮಾಜದ ಕಟ್ಟ ಕಡೆಯ ವ್ಯಕ್ತಿ ಸರ್ಕಾರದಿಂದ ಲಾಭ ಪಡೆಯಬೇಕು ಎಂದು ಸುರೇಶ್ ನಾಯಕ್ ಹೇಳಿದರು.