ಮಂಗಳೂರು, ಸೆ.೧೪ (DaijiworldNews/SM): ದ.ಕ. ಜಿಲ್ಲೆಯಲ್ಲಿ ಸೋಮವಾರದಂದು ಮತ್ತೆ 413 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 17776ಕ್ಕೆ ಏರಿಕೆಯಾಗಿದೆ.

ಇಂದಿನ ಸೋಂಕಿತರ ಪೈಕಿ ಮಂಗಳೂರು ತಾಲೂಕಿನ 169 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 135 ಮಂದಿಯಲ್ಲಿ ಸಂಪರ್ಕದಿಂದ ಸೋಂಕು ಪತ್ತೆಯಾಗಿದೆ. 185 ಮಂದಿಯಲ್ಲಿ ಐಎಲ್ ಐ ಪ್ರಕರಣ ಪತ್ತೆಯಾಗಿದ್ದು, ಹದಿನೇಳು ಸಾರಿ ಕೇಸ್ ಗಳಾಗಿವೆ. ಈ ನಡುವೆ 76 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ದ.ಕ. ಜಿಲ್ಲೆಯ ಸೋಮವಾರದ ಕೊರೋನಾ ವರದಿ:
ದ.ಕ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಟ್ಟವರು-122069 ಮಂದಿ
ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ ನೆಗೆಟಿವ್ ವರದಿಗಳು-104293
ಇಂದಿನ ತನಕ ಪತ್ತೆಯಾದ ಒಟ್ಟು ಪಾಸಿಟಿವ್ ಕೇಸ್ ಗಳು-17776
ಸೋಮವಾರದಂದು ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರು-413 ಮಂದಿ
ಜಿಲ್ಲೆಯಲ್ಲಿ ಸೋಮವಾರದಂದು ಗುಣಮುಖರಾದವರು-297
ಜಿಲ್ಲೆಯಲ್ಲಿ ಒಟ್ಟು ಗುಣಮುಖರಾಗಿ ಬಿಡುಗಡೆಯಾದವರು-13284 ಮಂದಿ
ಜಿಲ್ಲೆಯಲ್ಲಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವವರು-4045 ಮಂದಿ
ಸೋಮವಾರದಂದು ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರು-5 ಮಂದಿ
ದ.ಕ. ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸಾವಿನ ಸಂಖ್ಯೆ 447ಕ್ಕೆ ಏರಿಕೆ